ಮೈಸೂರು: ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಇಲಾಖೆಯ ಹಾಗೂ ಜಿಲ್ಲೆಯ 47 ಸ್ತಬ್ಧ ಚಿತ್ರಗಳುಭಾಗವಹಿಸಲಿವೆ. ಅದರಲ್ಲಿ ಪ್ರಮುಖವಾಗಿ ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತೆಗೆ ಸೇರ್ಪಡೆಯಾದ ಬಾಗಲಕೋಟೆ ಮುಧೋಳ ನಾಯಿ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರತಿಮೆ ಗಮನ ಸೆಳೆದಿದೆ.
ಈ ಬಾರಿ ಮೆರವಣಿಗೆಯಲ್ಲಿ ಭಾಗವಹಿಸಿದ ಸ್ತಬ್ಧ ಚಿತ್ರಗಳ ವಿವರ ಇಲ್ಲಿದೆ.
1. ಬಾಗಲಕೋಟೆ- ಮುದೋಳ್ ಶ್ವಾನಗಳು, ಇಳಕಲ್ ಸೀರೆ
2. ಬಳ್ಳಾರಿ- ದುರ್ಗಮ್ಮ ದೇವಸ್ಥಾನ
3. ಬೆಳಗಾವ್- ಶ್ರೀ ರೇಣುಕಾದೇವಿ ದೇವಸ್ಥಾನ, ಕಮಲ ಬಸದಿ
4. ಬೆಂಗಳೂರು(ಗ್ರಾ)- ಕಪಿಲೇಶ್ವರ ದೇವಸ್ಥಾನ, ಜೈನ ಬಸದಿ
5. ಬೆಂಗಳೂರು(ನ)- ಕಡಲೆಕಾಯಿ ಪರಸೆ, ಬಸವಣ್ಣ ಗುಡಿ
6. ಬೀದರ್- ಅನುಭವ ಮಂಟಪ
7. ಚಾಮರಾಜನಗರ-ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ, ಪುನೀತ್ ರಾಜ್ ಕುಮಾರ್ ಪ್ರತಿಮೆ.
8. ಚಿಕ್ಕಬಳ್ಳಾಪುರ- ಗ್ರೀನ್ ನಂದಿ, ಭೋಗನಂದೀಶ್ವರ ದೇವಸ್ಥಾನ
9. ಚಿಕ್ಕಮಗಳೂರು- ಸಪ್ತನದಿಗಳ ತವರು ಪ್ರತಿಮೆ, ದೀಪಸ್ತಂಭ
10. ಚಿತ್ರದುರ್ಗ- ವಾಣಿ ವಿಲಾಸ ಜಲಾಶಯ, ಒನಕೆ ಓಬವ್ವ, ಕುದುರೆ ಮೇಲೆ ಆಸೀನರಾಗಿರುವ ಮದಕರಿ ನಾಯಕ
11. ದಕ್ಷಿಣ ಕನ್ನಡ- ಕಂಬಳ, ಹುಲಿವೇಷ, ಭೂತಕೋಲ
12. ದಾವಣಗೆರೆ- ಸಂತೆ ಬೆನ್ನೂರು, ಪುಷ್ಕರಣೆ
13. ಧಾರವಾಡ- ಸಂಗೀತ ದಿಗ್ಗಜರು
14. ಗದಗ- ಶ್ರೀಕ್ಷೇತ್ರ ಶ್ರೀಮಂತಗಡ, ಹೊಳಲಮ್ಮ ದೇವಿ, ಶಿವಾಜಿ
15. ಹಾಸನ- ಬೇಲೂರು, ಹಳೇಬೀಡ್, ಶ್ರವಣ ಬೆಳಗೊಳ ಗೊಮ್ಮಟಗಿರಿ
16. ಹಾವೇರಿ-ಗುರುಗೋವಿಂದ ಭಟ್ಟರು, ಸಂತ ಶಿಶುನಾಳ ಶರೀಫರು, ಮುಕೇಶ್ವರ ದೇವಾಲಯ
17. ಕಲಬುರ್ಗಿ- ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ
18. ಕೊಡಗು: ಬ್ರಹ್ಮಗಿರಿ ಬೆಟ್ಟ, ಬೃಗಂಡೇಶ್ವರ ದೇವಾಲಯ, ತಲಕಾವೇರಿ ತೀರ್ಥೋದ್ಭವ
19. ಕೋಲಾರ-ಬಿ.ಕೆ.ಎಸ್ ಅಯ್ಯಂಗಾರ್ ಯೋಗಥಾನ್, ಅಂತರಗಂಗೆ ಬೆಟ್ಟ
20. ಕೊಪ್ಪಳ- ಆನೆಗುಂದಿ ಬೆಟ್ಟ, ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ
21. ಮಂಡ್ಯ- ಮಂಡ್ಯ ಜಿಲ್ಲೆಯ ದೇವಾಲಯಗಳು
22. ಮೈಸೂರು- ಮೈಸೂರು ಜಿಲ್ಲೆಯ ವಿಶೇಷತೆಗಳು
23. ರಾಜಚೂರು- ಸಿರಿಧಾನ್ಯಗಳ ಬೆಳೆಗಳ ಅಭಿಯಾನ