ಕರ್ನಾಟಕ

karnataka

ETV Bharat / state

ಜಂಬೂಸವಾರಿ ವೇಳೆ ಜಯಚಾಮರಾಜ ಒಡೆಯರ್ ಪ್ರತಿಮೆಯ ಖಡ್ಗಕ್ಕೆ ಹಾನಿ - ಜಯಚಾಮರಾಜ ಒಡೆಯರ್ ಪ್ರತಿಮೆ

ಜಂಬೂಸವಾರಿ ವೀಕ್ಷಿಸಲು ಪ್ರತಿಮೆ ಬಳಿ ಸಾವಿರಾರು ಮಂದಿ ನೆರೆದಿದ್ದರು. ಈ ವೇಳೆ ಪ್ರತಿಮೆಗೆ ಹಾನಿಯಾಗಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಜೊತೆಗೆ ಪ್ರತಿಮೆಯ ಸುತ್ತಲಿನ ಹೂಕುಂಡಗಳು ಸಾರ್ವಜನಿಕರ ಕಾಲಿಗೆ ಸಿಲುಕಿ ಪುಡಿಪುಡಿಯಾಗಿವೆ.

sword-of-jayachamaraja-statue-in-mysore-got-damaged-in-jamboo-savari
ಜಂಬೂಸವಾರಿ ವೇಳೆ ಜಯಚಾಮರಾಜ ಒಡೆಯರ್ ಪ್ರತಿಮೆಯ ಖಡ್ಗಕ್ಕೆ ಹಾನಿ

By

Published : Oct 16, 2021, 12:29 PM IST

ಮೈಸೂರು: ಅರಮನೆಯ ಬಲರಾಮ ಗೇಟ್ ಮುಂಭಾಗವಿರುವ ಜಯಚಾಮರಾಜ ಒಡೆಯರ್ ಪ್ರತಿಮೆಯ ಖಡ್ಗ ಮುರಿದುಬಿದ್ದಿದೆ. ಶುಕ್ರವಾರ ಅರಮನೆ ಆರವಣದಲ್ಲಿ ನಡೆಯುತ್ತಿದ್ದ ಜಂಬೂಸವಾರಿ ವೀಕ್ಷಣೆಗೆ ಜನರು ಮುಗಿಬಿದ್ದ ಹಿನ್ನೆಲೆ ಪ್ರತಿಮೆಯ ಖಡ್ಗ ಮುರಿದು ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಜಂಬೂಸವಾರಿ ವೇಳೆ ಜಯಚಾಮರಾಜ ಒಡೆಯರ್ ಪ್ರತಿಮೆಯ ಖಡ್ಗಕ್ಕೆ ಹಾನಿ

ದಸರಾ ಸಡಗರ ಹಿನ್ನೆಲೆ ಜಯಚಾಮರಾಜ ಒಡೆಯರ್ ಪ್ರತಿಮೆಯನ್ನ ದೀಪಾಲಂಕಾರ ಹಾಗೂ ಹೂವಿನಿಂದ ಸಿಂಗರಿಸಲಾಗಿತ್ತು. ಈ ವೇಳೆ ಜಂಬೂಸಬಾರಿ ವೀಕ್ಷಿಸಲು ಪ್ರತಿಮೆ ಬಳಿ ಸಾವಿರಾರು ಮಂದಿ ನೆರೆದಿದ್ದರು. ಈ ವೇಳೆ ನೂಕುನುಗ್ಗಲಲ್ಲಿ ಪ್ರತಿಮೆಯ ಖಡ್ಗ ಮುರಿದಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ: ಒಂದು ಅಡಿಯಷ್ಟು ವಾಲಿದ ಪೊಲೀಸ್ ಕ್ವಾಟರ್ಸ್

ABOUT THE AUTHOR

...view details