ಕರ್ನಾಟಕ

karnataka

ETV Bharat / state

ಜಿಲ್ಲೆ ಕೊರೊನಾ ಮುಕ್ತವಾಗಿದೆ ಎಂದು ನಿರ್ಲಕ್ಷ್ಯ ಬೇಡ: ಸುತ್ತೂರು ಶ್ರೀ ಕಿವಿಮಾತು - sutthuru math

ಮೈಸೂರು ಜಿಲ್ಲೆ ಕೊರೊನಾ ಮುಕ್ತವಾಗಿದೆ ಎಂದು ಜನರು ನಿರ್ಲಕ್ಷ್ಯ ಮಾಡಬಾರದು ಎಂದು ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಿವಿಮಾತು ಹೇಳಿದರು.

mysuru
ಸುತ್ತೂರು ಶ್ರೀ ಕಿ

By

Published : May 16, 2020, 3:57 PM IST

ಮೈಸೂರು: ಜಿಲ್ಲೆ ಕೊರೊನಾ ಮುಕ್ತವಾಗಿದೆ ಎಂದು ಜನರು ನಿರ್ಲಕ್ಷ್ಯ ತಾಳಬಾರದು ಎಂದು ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಿವಿಮಾತು ಹೇಳಿದರು.

ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಿವಿಮಾತು

ಜಿಲ್ಲೆ ಗ್ರೀನ್ ಝೋನ್​ನಲ್ಲಿಯೇ ಇರುವಂತೆ ಮಾಡಿದ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಲು ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರಿಗೆ ಸುತ್ತೂರು ಶಾಖಾ ಮಠದಲ್ಲಿ ಪುಷ್ಪ ಮಳೆಗೈದು ಅವರು ಮಾತನಾಡಿದರು. ಜಿಲ್ಲೆಯು ಕೊರೊನಾ ಮುಕ್ತವಾಗಿ ಆರೆಂಜ್​ನಿಂದ ಗ್ರೀನ್ ಝೋನ್​ಗೆ ಬಂದಿರಬಹುದು. ಹಾಗಂತ ಯಾರೂ ಕೂಡ ನಿರ್ಲಕ್ಷ್ಯ ಹಾಗೂ ಉದಾಸೀನ ಮಾಡಬೇಡಿ. ಹೇಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸರ್ಕಾರದ ಆದೇಶ ಪಾಲಿಸಿದ್ದೀರೋ ಅದೇ ರೀತಿ ಕೊರೊನಾ ಪ್ರಪಂಚ ಮುಕ್ತವಾಗುವವರೆಗೆ ಎಚ್ಚರಿಕೆ ವಹಿಸಬೇಕು ಎಂದರು.

ಇನ್ನು ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಲು ಆಗಿನ ಉಸ್ತುವಾರಿ ಸಚಿವರು, ಇಂದಿನ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ಕೊಡುಗೆಯೂ ಇದೆ. ಕೊರೊನಾ ಮುಕ್ತ ಮಾಡಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೀತೆ ಎಂದರು.

ABOUT THE AUTHOR

...view details