ಮೈಸೂರು:ಸುತ್ತೂರು ಮಠ ಎಲ್ಲರೊಂದಿಗೆ ಮಾನವೀಯ ಬಾಂಧವ್ಯ ಹೊಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣನೆ ಮಾಡಿದರು.
ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ಏರ್ಪಡಿಸಿದ್ದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ 1061ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುತ್ತೂರು ಮಠವು ಜಾತಿ, ಮತ, ಪಂಥ ಮೀರಿದ ಮಾನವೀಯ ಬಾಂಧವ್ಯದ ಮೌಲ್ಯಗಳನ್ನು ಎಲ್ಲರ ಜೊತೆಗೂ ಹೊಂದಿದೆ. ಬೇರೆ ಮಠಗಳಿಗೆ, ಸಂಸ್ಥೆಗಳಿಗೆ ಸುತ್ತೂರು ಮಠ ಮಾದರಿಯಾಗಿದೆ ಎಂದರು.
ಶ್ರೀ ಶಿವರಾತ್ರೀಶ್ವರ 1061ನೇ ಜಯಂತಿ ಕಾರ್ಯಕ್ರಮ ಮಠ ಮಾಡುವ ಒಳ್ಳೆಯ ಕಾರ್ಯಗಳಿಗೆ ಸರ್ಕಾರ ಎಂದೆಂದಿಗೂ ಬೆಂಬಲವಾಗಿ ನಿಲ್ಲಲಿದೆ. ಮಠದಿಂದ ಸಮಾಜಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸುತ್ತೂರು ಪಂಚಾಂಗ ಹಾಗೂ ಕೃತಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ಎಸ್.ಟಿ. ಸೋಮಶೇಖರ, ಸಚಿವ ನಾರಯಣ ಗೌಡ, ಶಾಸಕ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ತನ್ವೀರ್ ಸೇಠ್, ಎನ್. ಮಹೇಶ, ನಿರಂಜನ ಕುಮಾರ್, ನಟ ದೊಡ್ಡಣ್ಣ, ನಿರ್ದೇಶಕ ರಾಜೇಂದ್ರ ಪ್ರಸಾದ್ ಮತ್ತಿತರರು ಹಾಜರಿದ್ದರು.