ಕರ್ನಾಟಕ

karnataka

ETV Bharat / state

ಅನುಮಾನಾಸ್ಪದವಾಗಿ ಯುವಕ ಸಾವು: ಶವವಿಟ್ಟು ಆಸ್ಪತ್ರೆ ಮುಂದೆ ಪೋಷಕರ ಪ್ರತಿಭಟನೆ - Suspectedly youngster death mysore news

ಹೊಟ್ಟೆ ನೋವೆಂದು ಹುಣಸೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡ್ರಿಪ್ಸ್, ಇಂಜೆಕ್ಷನ್‌, ಮಾತ್ರೆಯನ್ನು ರಾಹುಲ್​ ಎಂಬ ಯುವಕ ತೆಗೆದುಕೊಂಡು ಬಂದಿದ್ದ. ಬುಧವಾರ ರಾತ್ರಿ ಮನೆಗೆ ಬಂದು ಮಲಗಿದ್ದ ರಾಹುಲ್​, ಬೆಳಗ್ಗೆಯೊಳಗೆ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಪೋಷಕರು ಮೃತದೇಹವನ್ನು ಆಸ್ಪತ್ರೆ ಮುಂದಿಟ್ಟು ಪ್ರತಿಭಟಿಸುತ್ತಿದ್ದಾರೆ.

Suspectedly youngster death
ಅನುಮಾನಾಸ್ಪದವಾಗಿ ಯುವಕ ಸಾವು

By

Published : Feb 18, 2021, 11:47 AM IST

Updated : Feb 18, 2021, 11:55 AM IST

ಮೈಸೂರು: ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವಕನಿಗೆ ವೈದ್ಯರು ಇಂಜೆಕ್ಷನ್ ನೀಡಿದ ಬಳಿಕ, ಮನೆಗೆ ಬಂದ ಈತ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.

ಅನುಮಾನಾಸ್ಪದವಾಗಿ ಯುವಕ ಸಾವು

ಪಟ್ಟಣದ ನಿವಾಸಿ ಬಾಬುಲಾಲ್ ಪುತ್ರ ರಾಹುಲ್ (19) ಅನುಮಾನಾಸ್ಪದವಾಗಿ ಮೃತಪಟ್ಟ ಯುವಕ. ಈತ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆ ಹುಣಸೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡ್ರಿಪ್ಸ್​​ ಹಾಕಿ ಇಂಜೆಕ್ಷನ್‌, ಮಾತ್ರೆ ಕೊಟ್ಟು ಕಳುಹಿಸಿದ್ದಾರೆ.

ಬುಧವಾರ ರಾತ್ರಿ ಮನೆಗೆ ಬಂದು ಮಲಗಿದ್ದ ರಾಹುಲ್​, ಬೆಳಗ್ಗೆ ಏಳದೇ ಇದ್ದಾಗ ಅನುಮಾನಗೊಂಡ ಪೋಷಕರು ಆತನ ಬಳಿ ಹೋಗಿ ನೋಡಿದಾಗ, ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ಓದಿ: ಪತ್ನಿಯೊಂದಿಗೆ ಕಿರಿಕ್​ ಮಾಡಿಕೊಂಡ ಡ್ರಗ್ಸ್​ ಕೇಸ್​ ಆರೋಪಿ: ವೈಭವ್​ ಜೈನ್​ ಮತ್ತೆ ಜೈಲು ಪಾಲು

ಕೂಡಲೇ ಮೃತದೇಹವನ್ನು ಆಸ್ಪತ್ರೆ ಮುಂದೆ ಇಟ್ಟು, ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Feb 18, 2021, 11:55 AM IST

ABOUT THE AUTHOR

...view details