ಮೈಸೂರು:ವೃದ್ಧನೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ನಡೆದಿದೆ.
ಮೈಸೂರಿನಲ್ಲಿ ಅನುಮಾನಸ್ಪದವಾಗಿ ವೃದ್ಧ ಸಾವು: ಕೊಲೆ ಶಂಕೆ - ಅನುಮಾನಸ್ಪದವಾಗಿ ವೃದ್ಧ ಸಾವು
ವೃದ್ಧನೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ನಡೆದಿದೆ.

ಬಸವರಾಜು ಮೃತ ವೃದ್ಧ
ಮೈಸೂರಿನಲ್ಲಿ ಅನುಮಾನಸ್ಪದವಾಗಿ ವೃದ್ಧ ಸಾವು
ನಂಜನಗೂಡು ಪಟ್ಟಣದ ಎನ್ಜಿಒ ಕಾಲೋನಿಯ ನಿವಾಸಿ ಬಸವರಾಜು (60) ಮೃತ ವೃದ್ಧ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಹೊರಗೆ ಹೋಗಿ ಬರುತ್ತೇನೆ ಎಂದು ತನ್ನ ಮನೆಯವರಿಗೆ ತಿಳಿಸಿ ಹೋಗಿದ್ದ ವೃದ್ಧ, ನಂಜನಗೂಡು-ಮೈಸೂರು ಹೆದ್ದಾರಿಯ ಅರಸು ಲೇಔಟ್ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಮೇಲ್ನೋಟಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಖಚಿತ ಮಾಹಿತಿ ತಿಳಿದು ಬಂದಿಲ್ಲ.
ಈ ಸಂಬಂಧ ನಂಜನಗೂಡಿನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.