ಮೈಸೂರು:ಒಂದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಗೃಹಿಣಿ ಅನುಮಾನಾಸ್ಪಾದವಾಗಿ ಮೃತಪಟ್ಟಿರುವ ಘಟನೆ ನಗರದ ಶ್ರೀರಾಂಪುರ ಎಸ್ಬಿಎಂ ಕಾಲೋನಿಯಲ್ಲಿ ನಡೆದಿದೆ.
ಆಶಾರಾಣಿ (28) ಮೃತ ದುರ್ದೈವಿ. ಮೂಲತಃ ನಂಜನಗೂಡು ತಾಲೂಕಿನ ಸರಗೂರು ಗ್ರಾಮದವರಾದ ಈಕೆಯನ್ನ ಒಂದು ತಿಂಗಳ ಹಿಂದಷ್ಟೇ ಟೆಕ್ಕಿ ಪ್ರದೀಪ್ ಎಂಬಾತನ ಜೊತೆ ವಿವಾಹ ಮಾಡಲಾಗಿತ್ತು. ಮದುವೆ ಸಂದರ್ಭದಲ್ಲಿ 5 ಲಕ್ಷ ರೂ. ನಗದು, 130 ಗ್ರಾಂ ಚಿನ್ನ ವರದಕ್ಷಿಣೆ ನೀಡಲಾಗಿತ್ತು ಎನ್ನಲಾಗಿದೆ.