ಕರ್ನಾಟಕ

karnataka

ETV Bharat / state

ಶಾಸಕ ತನ್ವೀರ್ ಸೇಠ್​​ ಆರೋಗ್ಯ ಸ್ಥಿತಿ ಹೇಗಿದೆ? ವೈದ್ಯರ ಮಾಹಿತಿ ಇಂತಿದೆ

ಶಾಸಕರ ಆರೋಗ್ಯದಲ್ಲಿ ಚೇತರಿಕೆಯ ಜೊತೆ ಬದಲಾವಣೆಯಾಗಿದ್ದು ಕಿಡ್ನಿ ಹಾಗೂ ರಕ್ತದೊತ್ತಡ ಸರಿಯಾಗಿದೆ. ಅವರು ಆಹಾರವನ್ನು ಅವರೇ ಸೇವಿಸುತ್ತಾರೆ, ಇವತ್ತು ಶಾಸಕರಿಗೆ ಸಣ್ಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಶಾಸಕ ತನ್ವೀರ್​ ಸೇಠ್​ ಆರೋಗ್ಯ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ.

ಶಾಸಕ ತನ್ವೀರ್ ಸೇಠ್​​ಗೆ ಶಸ್ತ್ರ ಚಿಕಿತ್ಸೆ,ವೈದ್ಯರ ಮಾಹಿತಿ

By

Published : Nov 21, 2019, 5:59 PM IST

ಮೈಸೂರು: ಹಲ್ಲೆಗೆ ಒಳಗಾಗಿದ್ದ ಶಾಸಕ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದರೂ ಕಿವಿಯಲ್ಲಿ ಸ್ವಲ್ಪ ತೊಂದರೆ ಇದೆ ಎಂದು ವೈದ್ಯರಾದ ಉಪೇಂದ್ರ ಶೆಣೈ ಮತ್ತು ದತ್ತಾತ್ರೇಯ ಶಾಸಕರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ನರ ಕಟ್ ಆದ ಹಿನ್ನೆಲೆ ಕಿವಿಯ ಸಣ್ಣ ತುಂಡಿಗೆ ಹೊಲಿಗೆ ಹಾಕಿದ್ದೆವು, ಆದರೆ ಅದು ಸರಿ ಹೋಗದ ಕಾರಣ ಆಪರೇಷನ್ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿದ ಜಾಗಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದೇವೆ ಎಂದು ಡಾ. ಉಪೇಂದ್ರ ಶೆಣೈ ಹೇಳಿದರು.

ಶಾಸಕ ತನ್ವೀರ್ ಸೇಠ್​​ಗೆ ಶಸ್ತ್ರ ಚಿಕಿತ್ಸೆ,ವೈದ್ಯರ ಮಾಹಿತಿ
ಮತ್ತೊಬ್ಬ ವೈದ್ಯ ದತ್ತಾತ್ರೇಯ ಮಾತನಾಡಿ ಕತ್ತಿನ ಭಾಗ ಊದಿಕೊಂಡಿರುವುದರಿಂದ ಜೋರಾಗಿ ಮಾತನಾಡಲು ಆಗುತ್ತಿಲ್ಲ. ತುಟಿಗೆ ಸೇರಿದ ನರ ಕಟ್ ಆಗಿರುವುದರಿಂದ ಮಾತನಾಡುವಾಗ ತುಟಿಯು ಓರೆಯಾಗಿ ಕಾಣಿಸುತ್ತದೆ. ಆದ್ದರಿಂದ ಯಾವುದೇ ತೊಂದರೆ ಇಲ್ಲ, ಇದು ದೀರ್ಘಕಾಲ ಉಳಿಯುತ್ತದೆ. ಆಸ್ಪತ್ರೆಯಲ್ಲಿ 4-5 ದಿನ ಇರಬೇಕು ನಂತರ ಕೆಲವು ವಾರ ವಿಶ್ರಾಂತಿ ಪಡೆಯಬೇಕು ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details