ಮೈಸೂರು: ಪ್ರತಿ ಭಾನುವಾರ ಇದ್ದ ಲಾಕ್ ಡೌನ್ನ್ನು ರಾಜ್ಯ ಸರ್ಕಾರ ತೆರವುಗೊಳಿಸಿದ್ದರಿಂದ, ಸಾರ್ವಜನಿಕರು ಕೊರೊನಾ ಆರ್ಭಟಕ್ಕೂ ಕ್ಯಾರೇ ಎನ್ನದೇ ಸಂಚರಿಸುತ್ತಿದ್ದಾರೆ.
ಮೈಸೂರಿನಲ್ಲಿ ಸಂಡೇ ಲಾಕ್ ಡೌನ್ ತೆರವು: ವ್ಯಾಪಾರ-ವಹಿವಾಟು ಆರಂಭ - ಮೈಸೂರಿನಲ್ಲಿ ಲಾಕ್ ಡೌನ್ ತೆರವು
ಭಾನುವಾರದ ಲಾಕ್ ಡೌನ್ನ್ನು ರಾಜ್ಯ ಸರ್ಕಾರ ತೆರವುಗೊಳಿಸಿದ್ದರಿಂದ, ಮೈಸೂರಿನ ದೇವರಾಜ ಮಾರುಕಟ್ಟೆ ಮುಂಭಾಗ ಬೀದಿ ಬದಿ ವ್ಯಾಪಾರಿಗಳು ಎಂದಿನಂತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಸಂಡೇ ಲಾಕ್ ಡೌನ್ ತೆರವು: ವ್ಯಾಪಾರ-ವಹಿವಾಟು ಆರಂಭ..
ಮೈಸೂರಿನ ದೇವರಾಜ ಮಾರುಕಟ್ಟೆ ಮುಂಭಾಗ ಬೀದಿ ಬದಿ ವ್ಯಾಪಾರಿಗಳು ಎಂದಿನಂತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ದೇವರಾಜ ಮಾರುಕಟ್ಟೆ ಒಳಗೆ, ಶಿವರಾಂಪೇಟೆ, ದೇವರಾಜ ಅರಸು ರಸ್ತೆ ಸೇರಿದಂತೆ ನಗರದ ಎಲ್ಲ ವಾಣಿಜ್ಯ ಕೇಂದ್ರಗಳು ತೆರೆದಿದ್ದು, ಗ್ರಾಹಕರನ್ನ ಸೆಳೆಯಲು ತುದಿಗಾಲ ಮೇಲೆ ನಿಂತಿವೆ.
ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ಬಸ್ ಸಂಚಾರವಿದ್ದರೂ, ಪ್ರಯಾಣಿಕರ ಸುಳಿವು ಇರಲಿಲ್ಲ. ಆದರೆ ಮಾಂಸದ ಅಂಗಡಿಗಳ ಮುಂದೆ ಸಾರ್ವಜನಿಕರು ಕ್ಯೂನಲ್ಲಿ ನಿಂತಿದ್ದರು.