ಮೈಸೂರು: ರಾಮಕೃಷ್ಣ ನಗರದ ನೃಪತುಂಗ ಕನ್ನಡ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ 'ಸುಗ್ಗಿ ಸಂಭ್ರಮ' ಕಾರ್ಯಕ್ರಮಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.
ಮೈಸೂರಿನಲ್ಲಿ ಸುಗ್ಗಿ ಸಂಭ್ರಮಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ - ಶ್ರೀ ದೇವಿ ಮಹಿಳಾ ಸಂಘದಿಂದ ಸುಗ್ಗಿ ಸಂಭ್ರಮ
ಮೈಸೂರಿನ ರಾಮಕೃಷ್ಣ ನಗರದ ನೃಪತುಂಗ ಕನ್ನಡ ಶಾಲೆ ಆವರಣದದಲ್ಲಿ ಹಮ್ಮಿಕೊಂಡಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.
ಶ್ರೀದೇವಿ ಮಹಿಳಾ ಸಂಘದಿಂದ ಆಯೋಜಿಸಿದ್ದ ಸುಗ್ಗಿ ಸಂಭ್ರಮಕ್ಕೆ ಅಳಿಗುಳಿ ಮನೆ ಆಟವಾಡುವ ಮೂಲಕ ವಿಭಿನ್ನವಾಗಿ ಜಿ.ಟಿ.ದೇವೇಗೌಡ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ನಗರ ಪ್ರದೇಶಕ್ಕೆ ಕಾಲಿಡುತ್ತಿರುವ ಇಂದಿನ ಯುವ ಜನತೆ ಹಳ್ಳಿ ಹಬ್ಬ, ಸಾಂಪ್ರದಾಯಿಕ ಆಟಗಳನ್ನು ಮರೆಯುತ್ತಿದ್ದಾರೆ. ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ, ನಗರದ ಜನತೆಗೆ ಹಳ್ಳಿ ಕ್ರೀಡೆಗಳನ್ನು ಪರಿಚಯಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಸಾವಯವ ಕೃಷಿಗೆ ನಾವುಗಳು ಹೆಚ್ಚು ಒತ್ತು ಕೊಡಬೇಕಾಗಿದೆ. ರಾಸಾಯನಿಕ ಗೊಬ್ಬರವನ್ನು ಬಳಸಿ ಬೆಳೆಯುವ ಬೆಳೆಗಳನ್ನು ತ್ಯಜಿಸಿ, ಸಿರಿ ಧಾನ್ಯಗಳು ಬಳಸುವ ಮೂಲಕ ಆಹಾರ ಕ್ರಮ ಬದಲಾಯಿಸಿಕೊಂಡರೆ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಸಲಹೆ ಕೊಟ್ಟರು.