ಮೈಸೂರು: ಕಬ್ಬು ಬೆಳೆಗಾರರ ಸಂಘದ ರೈತರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ 4 ದಿನಗಳಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಕಚೇರಿ, ಎಫ್ ಆರ್ ಪಿ ಹಣವನ್ನು ಪರಿಶೀಲನೆ, ನೆರೆಯಿಂದ ನಷ್ಟ ಅನುಭವಿಸಿದ್ದವರಿಗೆ ಪರಿಹಾರ, ಕೃಷಿ ಸಾಲಗಳಿಗೆ ಬಡ್ಡಿ ತೆಗೆಯಬೇಕು, ಹಾಗೂ ರೈತನ ಸಾಗುವಳಿ ಚೀಟಿ ನೀಡುವಂತೆ ಇನ್ನೂ ಹಲವರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಿ 5ನೇ ದಿನಕ್ಕೆ ಕಾಲಿಟ್ಟರು ಯಾವುದೇ ಪ್ರತಿಕ್ರಿಯೆ ನೀಡಿಲ್ಲವಂತೆ.
"ಸರ್ಕಾರವು ಕಾರ್ಖಾನೆಗಳು ಮತ್ತು ಬಂಡವಾಳಶಾಹಿಗಳ ಹತ್ತಿರ ಭಿಕ್ಷೆ ಬೇಡುತ್ತಿದೆ. ಇದನ್ನು ಬಿಟ್ಟು ರೈತರ ಪರವಾಗಿ ಕೆಲಸ ಮಾಡಬೇಕು". ಎಂದು ತಟ್ಟೆ-ಲೋಟವನ್ನ ಬಡಿದ ಪ್ರತಿಭಟನೆ ಮೂಲಕ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಕಬ್ಬು ಬೆಳೆಗಾರ ಸಂಘದ ಕಾರ್ಯದರ್ಶಿ ಭಾಗ್ಯರಾಜ್ ಆಗ್ರಹಿಸಿದರು.
ಓದಿ;ಧಾರವಾಡದಲ್ಲಿ ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ: ಉರುಳುಸೇವೆ, ಅರೆಬೆತ್ತಲೆ ಪ್ರತಿಭಟನೆ