ಮೈಸೂರು: ಕೊರೊನಾ ಅಬ್ಬರದಿಂದ ಸಂಕಷ್ಟದಲ್ಲಿರುವ, ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಮತ್ತೊಮ್ಮೆ 20 ಲಕ್ಷ ರೂ. ನೀಡುವ ಮೂಲಕ, ಪ್ರಾಣಿಗಳ ಮೇಲಿನ ಪ್ರೇಮದ ಜೊತೆ ಮಾನವೀಯತೆ ಮೆರೆದಿದ್ದಾರೆ.
ಮೈಸೂರು ಮೃಗಾಲಯಕ್ಕೆ 20 ಲಕ್ಷ ರೂ. ದೇಣಿಗೆ ನೀಡಿದ ಸುಧಾಮೂರ್ತಿ
ಮೃಗಾಲಯದ ಪ್ರಾಣಿಗಳ ಆರೋಗ್ಯ ಮತ್ತು ನಿರ್ವಹಣೆಗಾಗಿ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಮೇ 11 ರಂದು 20 ಲಕ್ಷ ರೂ.ದೇಣಿಗೆ ನೀಡಿದ್ದರು. ಸೆಪ್ಟಂಬರ್ 25 ರಂದು ಮತ್ತೊಮ್ಮ 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಮೈಸೂರು ಮೃಗಾಲಯಕ್ಕೆ 20 ಲಕ್ಷ ರೂ. ದೇಣಿಗೆ ನೀಡಿದ ಸುಧಾಮೂರ್ತಿ
ಮೃಗಾಲಯದ ಪ್ರಾಣಿಗಳ ಆರೋಗ್ಯ ಮತ್ತು ನಿರ್ವಹಣೆಗಾಗಿ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಮೇ 11ರಂದು 20 ಲಕ್ಷ ರೂ.ದೇಣಿಗೆ ನೀಡಿದ್ದರು. ಸೆಪ್ಟಂಬರ್ 25 ರಂದು ಮತ್ತೊಮ್ಮ 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಮೃಗಾಲಯದ ಪ್ರಾಣಿಗಳ ಕಲ್ಯಾಣಕ್ಕಾಗಿ ಒಟ್ಟಾರೆ 40 ಲಕ್ಷ ರೂಪಾಯಿ ನೀಡುವ ಮೂಲಕ ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಯನ್ನು ತೋರಿದ್ದಾರೆ. ಕೊರೊನಾ ಅಟ್ಟಹಾಸದಿಂದ ಪ್ರಾಣಿಗಳ ರಕ್ಷಣೆ ಮಾಡುವ ಉದ್ದೇಶದಿಂದ ಮೃಗಾಲಯವು ಎರಡು ತಿಂಗಳು ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಕ್ಕೆ ಮೃಗಾಲಯ ನಿರ್ವಹಣೆ ಕಷ್ಟವಾಗಿದ್ದರಿಂದ ಅನೇಕ ದಾನಿಗಳು ಸಹಾಯ ಮಾಡಿದ್ದಾರೆ.
Last Updated : Oct 1, 2020, 2:54 PM IST