ಮೈಸೂರು:ಮಾರಣಾಂತಿಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಇಲ್ಲಿನ ಕೆ ಆರ್ ಆಸ್ಪತ್ರೆ ವೈದ್ಯರು ಜೀವ ಉಳಿಸಿದ್ದಾರೆ.
ಅಪರೂಪದ ಕ್ಯಾನ್ಸರ್ ಕಾಯಿಲೆಯಾದ ರೆಟ್ರೋಪರಿಟೋನಿಯಲ್ ಲೈಪೋಸಾರ್ಕೋಮದಿಂದ ಬಳಲುತ್ತಿದ್ದ ಸುಮಾರು 65 ವರ್ಷದ ವೃದ್ಧರೊಬ್ಬರು ಕೆ ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಕ್ಯಾನ್ಸರ್ ಬಾಧಿತರಲ್ಲಿ ಕೇವಲ ಶೇ.1ರಷ್ಟು ಜನರಲ್ಲಿ ಕಾಣಿಸಿಕೊಳ್ಳುವ ಇದು, ದೇಹದ ಅಂಗಗಳಿಗೆ ಅತಿವೇಗವಾಗಿ ಹರಡಿ ಕೆಲವೇ ತಿಂಗಳಲ್ಲಿ ಜೀವಕ್ಕೆ ಕುತ್ತು ತರುವ ಕಾಯಿಲೆ ಇರುವುದು ಪರೀಕ್ಷೆಯಲ್ಲಿ ಪತ್ತೆಯಾಗಿತ್ತು.
ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ .ಬಿ.ಎನ್. ಆನಂದ ರವಿ ನೇತೃತ್ವದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಆರ್.ಡಿ. ಮಂಜುನಾಥ್, ಡಾ. ದೀಪ, ಅರವಳಿಕೆ ತಜ್ಞರಾದ ಡಾ. ಶ್ರೀನಿವಾಸ್, ಡಾ. ಮಾಲಿನಿ ಅವರನ್ನೊಳಗೊಂಡ ತಜ್ಞ ವೈದ್ಯರ ತಂಡವು ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿ, ಸುಮಾರು 7.5 ಕೆಜಿ ತೂಕದ ಕ್ಯಾನ್ಸರ್ ಗಡ್ಡೆಯನ್ನು ಹೊರ ತೆಗೆಯುವುದರಲ್ಲಿ ಯಶಸ್ಸಿಯಾಗಿದೆ.