ಮೈಸೂರು:ಮಧುಮೇಹದೊಂದಿಗೆ ಮೂತ್ರಪಿಂಡ ಕಾಯಿಲೆಗೆ ಒಳಗಾಗಿದ್ದ 35 ವರ್ಷದ ಗರ್ಭಿಣಿಗೆ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಏಕಕಾಲಿಕ ಮೇದೋಜ್ಜಿರಕ ಗ್ರಂಥಿ, ಕಿಡ್ನಿ ಕಸಿ(ಎಸ್‌ಪಿಕೆಟಿ)ಗೆ ಮಹಿಳೆ ಒಳಗಾಗಿದ್ದರು.
ಬಾಲ್ಯದಲ್ಲಿಯೇ ಮಧುಮೇಹ ಮತ್ತು ಡಯಾಲಿಸಿಸಸ್‌ನೊಂದಿಗೆ ದೀರ್ಘ ಕಾಲದ ಮೂತ್ರ ಪಿಂಡ (ಸಿಕೆಡಿ) ಕಾಯಿಲೆಯಿಂದ ಮಹಿಳೆ ಬಳಲುತ್ತಿದ್ದರು. ಕುವೆಂಪು ನಗರದ ಅಪೋಲೋ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ಈ ಗರ್ಭಿಣಿಗೆ ಹೆರಿಗೆಯಾಗಿದ್ದು, ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನು ತಾಯಿ-ಮಗು ಆರೋಗ್ಯವಾಗಿದ್ದಾರೆ.