ಮೈಸೂರು:ಶುಲ್ಕ ಪಾವತಿಸಲ್ಲ ಎಂದ ವಿದ್ಯಾರ್ಥಿಗಳನ್ನು ಆನ್ಲೈನ್ ತರಗತಿಗಳಿಂದ ಬ್ಲಾಕ್ ಮಾಡಲಾಗಿದೆ ಎಂಬ ಆರೋಪ ತಿ.ನರಸಿಪುರ ತಾಲೂಕಿನ ಸೇಂಟ್ ನೋಬಟ್೯ ಶಿಕ್ಷಣ ಸಂಸ್ಥೆಯ ವಿರುದ್ಧ ಕೇಳಿ ಬಂದಿದೆ.
ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ನೋ ಆನ್ಲೈನ್ ಕ್ಲಾಸ್ ಎಂದ ಶಿಕ್ಷಣ ಸಂಸ್ಥೆ: ಪೋಷಕರ ಆಕ್ರೋಶ - ಸೇಂಟ್ ನೋಬರ್ಟ್ ಶಿಕ್ಷಣ ಸಂಸ್ಥೆ
ಶುಲ್ಕ ಪಾವತಿಸಲ್ಲ ಎಂದ ವಿದ್ಯಾರ್ಥಿಗಳನ್ನು ಆನ್ಲೈನ್ ತರಗತಿಗಳಿಂದ ಬ್ಲಾಕ್ ಮಾಡಲಾಗಿದೆ ಎಂದು ಮೈಸೂರಿನ ಸೇಂಟ್ ನೋಬರ್ಟ್ ಶಿಕ್ಷಣ ಸಂಸ್ಥೆ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ.
ಶಾಲೆ ವಿರುದ್ಧ ಪೋಷಕರ ಆರೋಪ
ಕೊರೊನಾ ಹಾವಳಿಯಿಂದ ಕಂಗೆಟ್ಟಿರುವುದರಿಂದ ಯಾವುದೇ ಕೆಲಸವಿಲ್ಲದೇ ಪರದಾಡುವಂತಾಗಿದೆ. ಶುಲ್ಕ ಪಾವತಿಸಲು ಅವಕಾಶ ನೀಡುವಂತೆ ಕೇಳಿಕೊಂಡರೂ ಶಾಲೆಯ ಆಡಳಿತ ಮಂಡಳಿ ಕರುಣೆ ತೋರುತ್ತಿಲ್ಲ ಅಂತಿದ್ದಾರೆ ಪೋಷಕರು.