ಮೈಸೂರು:ಖಾಸಗಿ ಶಾಲೆಗಳು ಆನ್‌ಲೈನ್ ಶಿಕ್ಷಣಕ್ಕೆ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ಮಧ್ಯಮವರ್ಗದ ಜನ ಕಷ್ಟಪಡುವಂತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ಸುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಶಿಕ್ಷಣ ಇಲಾಖೆ ಕಠಿಣ ನಿರ್ಧಾರ ಕೈಗೊಳ್ಳಬೇಕು. ಕೇವಲ ಕಠಿಣ ನಿರ್ಧಾರವಲ್ಲ, ಅದನ್ನ ಕಾರ್ಯರೂಪಕ್ಕೆ ತರಬೇಕು ಎಂದು ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರತಿಕ್ರಿಯೆ ನಮಗೆಲ್ಲ ಸಂಬಳ ಹಿಡಿದಿದ್ದಾರೆ, ಶೇ.30ರಷ್ಟು ಸಂಬಳ ಹಿಡಿದು ಟಿಎಡಿಎ ಕಟ್ ಮಾಡಿದ್ದಾರೆ. ಆದ್ರೆ ಸರ್ಕಾರ ನೌಕರರಿಗೆ ಮಾತ್ರ ಸಂಬಳ ಹಿಡಿಯುತ್ತಿಲ್ಲವೇಕೆ?ಎಲ್ಲರು ಸಮಾನರು ಅಲ್ಲವೇ? ಎಲ್ಲರಿಗೂ ಒಂದೇ ರೀತಿ ಇರಬೇಕು ಎಂದರು.
ಕೋವಿಡ್ ಕಂಟ್ರೋಲ್ ಯಾರು ಮಾಡಬೇಕು ಹಾಗಾದ್ರೆ?, ಕೋವಿಡ್ ನಿಯಂತ್ರಣ ಮಾಡೋದ್ರಲ್ಲಿ ಅಧಿಕಾರಿಗಳ ಪಾತ್ರವೇನು? ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ನಡೆಸಬೇಕು ಎಂದು ಸಲಹೆ ನೀಡಿದ್ರು.
ಅಹ್ಮದ್ ಪಟೇಲ್ ನಿಧನಕ್ಕೆ ಸಂತಾಪ: ಅಹ್ಮದ್ ಪಟೇಲ್ ಅವರು, ಕಾಂಗ್ರೆಸ್ಗೆ ಅಪಾರ ಸೇವೆ ಮಾಡಿ ನಮ್ಮನ್ನ ಅಗಲಿದ್ದಾರೆ. ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದರು.