ಕರ್ನಾಟಕ

karnataka

ETV Bharat / state

ನಕಲಿ ತುಪ್ಪ ತಯಾರಿಕೆಯಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ: ಮೈಮುಲ್ ಅಧ್ಯಕ್ಷ - ನಕಲಿ ನಂದಿನಿ ತುಪ್ಪ ತಯಾರಿಕೆ ಪ್ರಕರಣ

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹೊಸಹುಂಡಿ ಗ್ರಾಮದಲ್ಲಿ ನಡೆಯುತ್ತಿದ್ದ ನಕಲಿ ನಂದಿನಿ ತುಪ್ಪ ತಯಾರಿಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಹೇಳಿದ್ದಾರೆ.

Maimul President pressmeet
ಮೈಮುಲ್ ಅಧ್ಯಕ್ಷ ಪ್ರಸನ್ನ ಸುದ್ದಿಗೋಷ್ಠಿ

By

Published : Dec 17, 2021, 4:47 PM IST

ಮೈಸೂರು:ನಕಲಿ ತುಪ್ಪ ತಯಾರಿಕೆಯಲ್ಲಿ ಯಾರೆ ಭಾಗಿಯಾದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಹೇಳಿದರು.

ಮೈಮುಲ್ ಅಧ್ಯಕ್ಷ ಪ್ರಸನ್ನ ಸುದ್ದಿಗೋಷ್ಠಿ

ಮೈಮುಲ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಕಲಿ ತುಪ್ಪ ತಯಾರಿಕೆಯಲ್ಲಿ ಮೈಮುಲ್ ಸಿಬ್ಬಂದಿ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಸೇವೆಯಿಂದಲೇ ವಜಾ ಮಾಡಿ ಜೈಲಿಗೆ ಕಳುಹಿಸುತ್ತೇವೆ. ಈ ಸಂಬಂಧ ಎಸ್ಪಿಯವರಿಗೆ ದೂರೂ ನೀಡಲಾಗಿದೆ ಎಂದರು.

ಮೈಸೂರಿನ ಹೊರ ವಲಯದ ಹೊಸಹುಂಡಿಯಲ್ಲಿ ನಕಲಿ ತುಪ್ಪ ತಯಾರಿಕೆ ಕಂಡು ಬಂದಿದೆ. ಅಲ್ಲಿಗೂ ನಾವು ಭೇಟಿ ನೀಡಿ ನಕಲಿ ತುಪ್ಪ ತಯಾರಿಕೆ ಘಟಕ ಸೀಜ್ ಮಾಡಿಸಿದ್ದೇವೆ. ಅಲ್ಲಿ ಸಿಕ್ಕಂತಹ ದಾಖಲೆಗಳ ಸಹಾಯದಿಂದ ಈಗಾಗಲೇ ಕೆಲವರ ಮೇಲೆ ಎಫ್‌ಐಆರ್ ಆಗಿದೆ. ಇದೇ ಮೊದಲ ಬಾರಿಗೆ ಇಂತಹ ಕಲಬೆರಿಕೆ ಜಾಲ ಕಂಡು ಬಂದಿದೆ ಎಂದು ಅವರು ತಿಳಿಸಿದರು.

ಸರ್ಕಾರದ ಮಟ್ಟದಲ್ಲಿ ತನಿಖೆಗೆ ಮನವಿ ಮಾಡಿದ್ದೇವೆ. ಗೋದಾಮಿನಲ್ಲಿ ಸಿಕ್ಕಿರುವ ಎಲ್ಲ ನಕಲಿ ವಸ್ತುಗಳನ್ನು ಸೀಜ್ ಮಾಡುವಂತಹ ಕೆಲಸವಾಗಿದೆ. ಫುಡ್ ಡಿಪಾರ್ಟ್‌ಮೆಂಟ್‌ಗೂ ಮಾದರಿಯನ್ನು ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಡಾಲ್ಡಾ, ಪಾಮೊಲಿನ್​ ನಂತಹ ವಸ್ತುಗಳನ್ನು ಬಳಸಿದ್ದಾರೆ. ಎಲ್ಲೆಲ್ಲಿ ಸರಬರಾಜು ಮಾಡಿದ್ದಾರೆ. ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಕುರಿತಂತೆ ತನಿಖೆಯಾಗುತ್ತಿದೆ. ಯಾರೆ ಪ್ರಭಾವಿಗಳಿದ್ರೂ ಬಿಡಲ್ಲ. ಜೈಲಿಗೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇಂತಹ ಅಕ್ರಮಗಳನ್ನು ತಡೆಯಲು ವಿಜಿಲೆನ್ಸ್ ಟೀಮ್​​​ ಚುರುಕುಗೊಳಿಸುತ್ತೇವೆ. ಪ್ರತಿ ವಾರಕ್ಕೊಮ್ಮೆ ಎಲ್ಲ ಪಾರ್ಲರ್‌ಗಳಿಗೆ ಭೇಟಿ ಕೊಟ್ಟು ಪರಿಶೀಲಿಸಬೇಕು‌. ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಪ್ರತಿ ವಾರ ಉತ್ಪನ್ನಗಳನ್ನು ಲ್ಯಾಬ್‌ಗೆ ತಂದು ಪರಿಶೀಲಿಸುತ್ತೇವೆ. ಕೂಲಂಕಷವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು. ರೈತರು, ಗ್ರಾಹಕರು ಮೈಮುಲ್‌ಗೆ ಎರಡು ಕಣ್ಣುಗಳಿದ್ದಂತೆ. ಇಬ್ಬರ ವಿಶ್ವಾಸವನ್ನು ಮೈಮುಲ್ ಕಾಪಾಡಿಕೊಳ್ಳಲಿದೆ ಎಂದರು.

ಇದನ್ನೂ ಓದಿ: ಮೈಸೂರು: ನಕಲಿ ನಂದಿನಿ ತುಪ್ಪ ಘಟಕದ ಮೇಲೆ ದಾಳಿ!

ABOUT THE AUTHOR

...view details