ಕರ್ನಾಟಕ

karnataka

ETV Bharat / state

ಹೆಚ್‌.ಡಿ ಕೋಟೆಯಲ್ಲಿ ಕೊರೊನಾ ಸೋಂಕಿತನ ಮೇಲೆ ಕಲ್ಲೆಸೆತ - ಮೈಸೂರು ಸುದ್ದಿ,

ಕೊರೊನಾ ಸೋಂಕಿತನ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

Stone pelting on corona penitent, attacking on corona penitent, Stone pelting and attacking on corona penitent in Mysore, Mysore news, Mysore crime news, ಕೊರೊನಾ ಸೋಂಕಿತ ಮೇಲೆ ಕಲ್ಲುಗಳಿಂದ ದಾಳಿ, ಮೈಸೂರಿನಲ್ಲಿ ಕೊರೊನಾ ಸೋಂಕಿತ ಮೇಲೆ ಕಲ್ಲುಗಳಿಂದ ದಾಳಿ, ಕೊರೊನಾ ಸೋಂಕಿತ ಮೇಲೆ ಕಲ್ಲುಗಳಿಂದ ದಾಳಿ ಸುದ್ದಿ, ಮೈಸೂರು ಸುದ್ದಿ, ಮೈಸೂರು ಅಪರಾಧ ಸುದ್ದಿ,
ಕೊರೊನಾ ಸೋಂಕಿತನ ಮೇಲೆ ಕಲ್ಲುಗಳಿಂದ ದಾಳಿ

By

Published : May 13, 2021, 11:41 AM IST

ಮೈಸೂರು:ಹೋಂ ಕ್ವಾರಂಟೈನ್ ಆಗಿದ್ದ ಕೋವಿಡ್ ಸೋಂಕಿತ ವ್ಯಕ್ತಿಯ ಮೇಲೆ ಕೆಲವು ಪುಂಡರು ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕಿನ ಕಾರಪುರ ಗ್ರಾಮದಲ್ಲಿ ನಡೆದಿದೆ.

ಹೋಂ ಕ್ವಾರಂಟೈನ್​ ಆಗಿದ್ದ ಕೋವಿಡ್ ಸೋಂಕಿತ ಮನೆಯಿಂದ ಹೊರ ಬಂದಿದ್ದಾರೆ. ಈ ಕಾರಣಕ್ಕೆ ಕೆಲವರು ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಲ್ಲೇಟಿನಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆ್ಯಂಬುಲೆನ್ಸ್ ಮೂಲಕ ಹೆಚ್.ಡಿ ಕೋಟೆ ಪಟ್ಟಣ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕಾರಪುರ ಗ್ರಾಮದ ಮುತ್ತಯ್ಯ, ದಾಸೇಗೌಡ, ಬಲರಾಮ ಎಂಬವರಿಂದ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಈ ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

ಇದನ್ನೂ ಓದಿ:ಬೆಂಗಳೂರಲ್ಲಿ 15,205 ಮಂದಿಗೆ ತಗುಲಿದ ಕೋವಿಡ್​

ABOUT THE AUTHOR

...view details