ಮೈಸೂರು:ಜುಲೈ 1 ಕ್ಕೆ ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಲು ಎಲ್ಲರೂ ಕೆಲಸದ ಒತ್ತಡದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಿನ್ನೆಯ ಘಟನೆಯ ನಂತರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಫೈಟ್ ಕೊರೊನಾ ವಿರುದ್ಧ: ರೋಹಿಣಿ ಸಿಂಧೂರಿ - ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಜಿಲ್ಲೆಯನ್ನು ಜುಲೈ 1ಕ್ಕೆ ಕೊರೊನಾ ಮುಕ್ತವಾಗಿ ಮಾಡಲು ವೈದ್ಯರು, ಆಶಾ ಕಾರ್ಯಕರ್ತೆಯರು, ನರ್ಸ್ಗಳು, ಅಂಗನವಾಡಿ ಕಾರ್ಯಕರ್ತೆಯರು ಹೀಗೆ ಎಲ್ಲರೂ ಅವರವರ ಕೆಲಸದ ಒತ್ತಡದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
![ನಮ್ಮ ಫೈಟ್ ಕೊರೊನಾ ವಿರುದ್ಧ: ರೋಹಿಣಿ ಸಿಂಧೂರಿ District Collector Rohini Sindhuri](https://etvbharatimages.akamaized.net/etvbharat/prod-images/768-512-12010869-thumbnail-3x2-abc.jpg)
ಇಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲೆಯನ್ನು ಜುಲೈ 1ಕ್ಕೆ ಕೊರೊನಾ ಮುಕ್ತವಾಗಿ ಮಾಡಲು ವೈದ್ಯರು, ಆಶಾ ಕಾರ್ಯಕರ್ತೆಯರು, ನರ್ಸ್ಗಳು, ಅಂಗನವಾಡಿ ಕಾರ್ಯಕರ್ತೆಯರು ಹೀಗೆ ಎಲ್ಲರೂ ಅವರವರ ಕೆಲಸದ ಒತ್ತಡದಲ್ಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೋವಿಡ್ ವಿಚಾರದಲ್ಲಿ ಸರಿಯಾಗಿ ಮಾಹಿತಿ ನೀಡಬೇಕು, ಎಲ್ಲರ ಸಹಕಾರ ಬೇಕು. ಜೊತೆಗೆ ಕೋವಿಡ್ ಸಂಬಂಧಿತ ಅಂಕಿ-ಅಂಶಗಳನ್ನು ಸರಿಯಾಗಿ ನೀಡಬೇಕು. ಇದಕ್ಕೆ ನಾನು ಅಥಾರಿಟಿ ಅಲ್ಲ, ಸಿಎಸ್ ಕ್ಲಾರಿಫೈ ಮಾಡುತ್ತಾರೆ. ನಾನು ಎಲ್ಲಾ ವಿಚಾರಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತರುತ್ತೇನೆ ಎಂದರು.