ಮೈಸೂರು:ಅಣ್ಣರಮೇಶ್ ಜಾರಕಿಹೊಳಿ ಸೇರಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
ಕೆಲವರು ಒಂದು ವರ್ಷದಿಂದ ಸಚಿವರಾಗಲು ಕಾಯುತ್ತಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬಂದ ದಿನದಿಂದಲೂ ಅದನ್ನು ಬೀಳಿಸಿ ಸಚಿವರಾಗಲು ಕಾಯುತ್ತಿದ್ದಾರೆ. ಆದರೆ, ಸಿಎಂ ಯಡಿಯೂರಪ್ಪ ವಿದೇಶದಿಂದ ಬಂದ ಕೂಡಲೇ ಅವರ ಆಸೆ ಈಡೇರಿಸಲಿ. ಅವರು ಬೇಗ ಸಚಿವರಾದರೆ ಒಳ್ಳೇದು, ಇದನ್ನೇ ನಾನೂ ಹಾರೈಸುತ್ತೇನೆ ಎಂದು ಪರೋಕ್ಷವಾಗಿ ಅಣ್ಣ ರಮೇಶ್ ಜಾರಕಿಹೊಳಿ ವಿರುದ್ಧ ವ್ಯಂಗ್ಯವಾಡಿದರು.