ಕರ್ನಾಟಕ

karnataka

ETV Bharat / state

ಬಳ್ಳಾರಿ ಜಿಲ್ಲೆಗೆ ಬೇಕು ಇನ್ನೂ 2 ಅಗ್ನಿ ಶಾಮಕ ಠಾಣೆ.. ಸಾಂಸ್ಕೃತಿಕ ನಗರಿಯಲ್ಲಿಲ್ಲ ಯಾವುದೇ ಸಮಸ್ಯೆ - ballary fire stations

ಬೆಂಕಿ ಅವಘಡಗಳಾದ್ರೆ ಆ ಸ್ಥಳಕ್ಕೂ ಮತ್ತು ಅಗ್ನಿಶಾಮಕ ಠಾಣೆ ನಡುವಿನ ಅಂತರ ಬಹಳ ಕಡಿಮೆ ಇದ್ದರೆ ಮಾತ್ರ ಠಾಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಬೇಗ ಅಗ್ನಿ ನಂದಿಸಲು ಸಾಧ್ಯ. ಹೆಚ್ಚು ಅಗ್ನಿಶಾಮಕ ಠಾಣೆಗಳು, ಸೂಕ್ತ ಸಿಬ್ಬಂದಿ ಜತೆಗೆ ಅಗ್ನಿ ನಂದಿಸಲು ಬೇಕಾದ ವಾಹನ, ಉಪಕರಣಗಳು ಇರಬೇಕು..

state need more fire stations to control fire accidents
ಬಳ್ಳಾರಿ ಜಿಲ್ಲೆಗೆ ಬೇಕಿದೆ ಇನ್ನೂ 2 ಅಗ್ನಿ ಶಾಮಕ ಠಾಣೆಗಳು: ಸಾಂಸ್ಕೃತಿಕ ನಗರಿಯಲ್ಲಿಲ್ಲ ಯಾವುದೇ ಸಮಸ್ಯೆ

By

Published : Apr 3, 2021, 7:48 PM IST

ಬಳ್ಳಾರಿ/ಮೈಸೂರು:ಅಗ್ನಿ ಅವಘಡಗಳಾದ್ರೆ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಅಗ್ನಿ ಶಮನ ಮಾಡಲು ಮುಂದಾಗ್ತಾರೆ. ಆದ್ರೆ, ಘಟನಾ ಸ್ಥಳ ಮತ್ತು ಅಗ್ನಿಶಾಮಕ ಠಾಣೆ ನಡುವಿನ ಅಂತರ ಹೆಚ್ಚಿದ್ರೆ ಬೆಂಕಿ ಹರಡಿ ಮತ್ತಷ್ಟು ಸಮಸ್ಯೆ ಆಗೋದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ, ಪ್ರತಿ ಜಿಲ್ಲೆಯಲ್ಲಿ ಅಗತ್ಯಕ್ಕೆ ಬೇಕಾದಷ್ಟು ಅಗ್ನಿಶಾಮಕ ಠಾಣೆಗಳು ಇರಬೇಕು.

ಜಿಲ್ಲೆಗೆ ಬೇಕಿದೆ ಇನ್ನೂ 2 ಅಗ್ನಿ ಶಾಮಕ ಠಾಣೆಗಳು.. ಸಾಂಸ್ಕೃತಿಕ ನಗರಿಯಲ್ಲಿಲ್ಲ ಯಾವುದೇ ಸಮಸ್ಯೆ..

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹತ್ತು ಅಗ್ನಿಶಾಮಕ ಠಾಣೆಗಳಿವೆ. ಇನ್ನೂ ಎರಡು ಠಾಣೆಗಳ ಸ್ಥಾಪನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿರುಬೇಸಿಗೆ ವೇಳೆ ಹೆಚ್ಚಾಗಿ ಅಗ್ನಿ ದುರಂತಗಳು ಸಂಭವಿಸೋದ್ರಿಂದ ಬಳ್ಳಾರಿ ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಮತ್ತು ಕಂಪ್ಲಿ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ಮಾಡಿಸಬೇಕಾಗಿದೆ.

ಮೈಸೂರು ಜಿಲ್ಲೆಯಲ್ಲಿ 11 ಅಗ್ನಿಶಾಮಕ ಠಾಣೆಗಳಿವೆ. ಸಿಬ್ಬಂದಿ ಸದಾ ಸಿದ್ಧರಿರುತ್ತಾರೆ. ಜತೆಗೆ ಬೆಂಕಿ ನಂದಿಸಲು ಬೇಕಾದ ಉಪಕರಣಗಳ ಕೊರತೆಯೂ ಸಹ ಇಲ್ಲ ಅಂತಾರೆ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು.

ಇದನ್ನೂ ಓದಿ:ಹುಲ್ಲಿನ ಬಣವೆಗಳು ಬೆಂಕಿಗಾಹುತಿಯಾದ ಪ್ರಕರಣಗಳೇ ಹೆಚ್ಚು: ಸ್ಫೋಟದ ಕೇಸ್​ಗಳು ಇಳಿಕೆ ​

ಯಾವ ಪ್ರದೇಶಗಳಲ್ಲಿ ಅಗ್ನಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತವೆಯೋ, ಅಲ್ಲಿ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಬೇಕಿದೆ.

ABOUT THE AUTHOR

...view details