ಮೈಸೂರು: ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯ ಪೌರಕಾರ್ಮಿಕರಿಗಾಗಿ ನಡೆಸುತ್ತಿರುವ ಅಡುಗೆ ಮನೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೌರಕಾರ್ಮಿಕರಿಗಾಗಿ ಆಹಾರ ತಯಾರಿಸುವ ಅಡುಗೆ ಮನೆ ಪರಿಶೀಲಿಸಿದ ಸಚಿವ ಸೋಮಶೇಖರ್ - ಆಹಾರ ವಿತರಣೆ
ನಗರದ ವಿವೇಕಾನಂದ ನಗರ ವೃತ್ತದ ಬಳಿ ಪೌರಕಾರ್ಮಿಕರಿಗಾಗಿ ಎಸ್.ಎ.ರಾಮದಾಸ್ ಅವರು ನಡೆಸುತ್ತಿರುವ ಅಡುಗೆ ಮನೆಗೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ST Somashekhar
ನಗರದ ವಿವೇಕಾನಂದ ನಗರ ವೃತ್ತದ ಬಳಿ ಪೌರಕಾರ್ಮಿಕರಿಗಾಗಿ ಎಸ್.ಎ.ರಾಮದಾಸ್ ಅವರ ನಡೆಸುತ್ತಿರುವ ಅಡುಗೆ ಮನೆ ಪರಿಶೀಲಿಸಿ ನಡೆಸಿ ಮಾತನಾಡಿದ ಸೋಮಶೇಖರ್, ಇಂತಹ ಕಷ್ಟದ ಕಾಲದಲ್ಲಿ ರಾಮದ್ದಾಸ್ ಅವರು ಪ್ರತಿನಿತ್ಯ 4 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡುತ್ತಿರುವುದು ಖುಷಿಯ ವಿಚಾರ. ಅವರ ಈ ಪ್ರಾಮಾಣಿಕ ಕೆಲಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಹಾಗೂ ಸರ್ಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಶಾಸಕ ಎಸ್.ಎ.ರಾಮದಾಸ್ ಅವರ ಈ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.