ಮೈಸೂರು:ಅಭಿರಾಮ್ ಜಿ.ಶಂಕರ್ ತರಬೇತಿಗಾಗಿ ಹೋಗಬೇಕು ಎಂದು ಕೋರಿಕೊಂಡಿದ್ದು, ಈ ಕಾರಣಕ್ಕಾಗಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಕೋರಿಕೆಯ ಮೇರೆಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ವರ್ಗ: ಎಸ್.ಟಿ.ಸೋಮಶೇಖರ್ - ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ವಿಚಾರ
ಹಿಂದಿನ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತರಬೇತಿಗಾಗಿ ಮಸ್ಸೂರಿಗೆ ಹೋಗಬೇಕು ಎಂದು ಕೋರಿಕೊಂಡಿದ್ದರಿಂದ ಅವರ ವರ್ಗಾವಣೆ ಮಾಡಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಸಚಿವ ಎಸ್.ಟಿ.ಸೋಮಶೇಖರ್
ವರ್ಗಾವಣೆಯನ್ನು ನಾವು ಮಾಡಿಲ್ಲ. 15 ದಿನಗಳ ಹಿಂದೆಯೇ ಅವರು ಮಸ್ಸೂರಿಗೆ 2 ವರ್ಷಗಳ ಅವಧಿಗೆ ತರಬೇತಿಗಾಗಿ ಹೋಗಬೇಕು. ನನ್ನನ್ನು ಬದಲಾವಣೆ ಮಾಡಿ ಎಂದು ಕೇಳಿದ್ದರು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ವರ್ಗಾವಣೆ ಮಾಡಲಾಗಿದೆ ಎಂದು ಸ್ಪಷ್ಟನೆ ಕೊಟ್ಟರು.