ಮೈಸೂರು :ದಸರಾ ಹೇಗೆ ಆಚರಿಸಬೇಕು ಎಂಬುದು ನನ್ನೊಬ್ಬನ ನಿರ್ಧಾರವಲ್ಲ. ಇದಕ್ಕೆಂದು ಹೈಪವರ್ ಕಮಿಟಿ ಇದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ಹೈಪವರ್ ಕಮಿಟಿಯಲ್ಲಿ ಒಂದು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆ ಬಳಿಕ ನಿರ್ಧಾರವನ್ನು ಹೇಳಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ದಸರಾ ಆಚರಣೆ ನನ್ನೊಬ್ಬನ ತೀರ್ಮಾನವಲ್ಲ.. ಹೈಪವರ್ ಕಮಿಟಿ ನಿರ್ಧರಿಸಲಿದೆ.. ಸಚಿವ ಎಸ್ ಟಿ ಸೋಮಶೇಖರ್ - beginning of the Mysore Dasara
ಇಲ್ಲಿ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲಾಗದು. 27ಕ್ಕೂ ಹೆಚ್ಚು ಮಂದಿ ಕಮಿಟಿಯಲ್ಲಿರುತ್ತಾರೆ. ಇಲ್ಲಿ ತೆಗೆದುಕೊಳ್ಳಲಾಗುವ ತೀರ್ಮಾನವನ್ನು ಅನುಷ್ಠಾನ ಮಾಡುವ ಹೊಣೆ ಇಲ್ಲಿನ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವನಾಗಿ ನನ್ನದಾಗಿರುತ್ತದೆ. ಇಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳುವುದು ಬೇಡ..
ಸಚಿವ ಎಸ್.ಟಿ ಸೋಮಶೇಖರ್
ಇಲ್ಲಿ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲಾಗದು. 27ಕ್ಕೂ ಹೆಚ್ಚು ಮಂದಿ ಕಮಿಟಿಯಲ್ಲಿರುತ್ತಾರೆ. ಇಲ್ಲಿ ತೆಗೆದುಕೊಳ್ಳಲಾಗುವ ತೀರ್ಮಾನವನ್ನು ಅನುಷ್ಠಾನ ಮಾಡುವ ಹೊಣೆ ಇಲ್ಲಿನ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವನಾಗಿ ನನ್ನದಾಗಿರುತ್ತದೆ. ಇಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳುವುದು ಬೇಡ ಎಂದು ಸಚಿವರು ತಿಳಿಸಿದರು.
ಪಕ್ಷದ ನಾಯಕರಾದ ಹೆಚ್ ವಿಶ್ವನಾಥ್ ಸೇರಿ ಎಲ್ಲರೂ ಅವರವರ ಅಭಿಪ್ರಾಯಗಳನ್ನು ತಿಳಿಸಬಹುದು. ಒಳ್ಳೆಯದಿದ್ದರೆ ನಾನು ಅದನ್ನು ಸ್ವಾಗತಿಸುತ್ತೇನೆ. ಅಂತಿಮವಾಗಿ ಎಲ್ಲ ತೀರ್ಮಾನವನ್ನು ಹೈಪವರ್ ಕಮಿಟಿ ತೆಗೆದುಕೊಳ್ಳುತ್ತದೆ ಎಂದರು.