ಮೈಸೂರು : ಆದಿವಾಸಿ ಬುಡಕಟ್ಟು ಜನರಿಗೆ ಲಾಕ್ಡೌನ್ ನಿಂದ ಒಂದು ಹೊತ್ತು ಊಟಕ್ಕೂ ಪರದಾಟ ಎಂಬ ಈಟಿವಿ ಭಾರತ್ ವರದಿಗೆ ಚಿತ್ರ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಸ್ಪಂದಿಸಿದ್ದು, ಇವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಕಳೆದ ಏಪ್ರಿಲ್ 1 ರಂದು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಆದಿವಾಸಿ ಸಮುದಾಯ ಎಂಬ ವರದಿಯನ್ನು ಈಟಿವಿ ಭಾರತ್ ಪ್ರಸಾರ ಮಾಡಿತ್ತು, ಇದರಲ್ಲಿ ನಂಜನಗೂಡು ತಾಲೂಕಿನ ಕಾಡಂಚಿನ ಬುಡಕಟ್ಟು ಜನರು ವಾಸವಿರುವ ಡೊರಣಕಟ್ಟೆ, ಕೊತ್ತನಹಳ್ಳಿ ಮತ್ತು ಚಿಲಕನಹಳ್ಳಿ ಸೇರಿದಂತೆ 2000 ಕ್ಕೂ ಅಧಿಕ ಬುಡಕಟ್ಟು ಜನರು ಇರುವ ಈ ಗ್ರಾಮಗಳಲ್ಲಿ ಲಾಕ್ ಡೌನ್ ನಿಂದ ಊಟ ಸಿಗದೇ ಪರದಾಡುತ್ತಿದ್ದರು.