ಕರ್ನಾಟಕ

karnataka

ETV Bharat / state

ಮೈಸೂರು: ಹಬ್ಬಗಳ ಪ್ರಯುಕ್ತ ವಿಶೇಷ ರೈಲು ಸಂಚಾರ - ನೈರುತ್ಯ ರೈಲ್ವೆ ವಿಭಾಗ

ಹಬ್ಬಗಳ ನಿಮಿತ್ತ ಮೈಸೂರಿನಿಂದ ಐದು ವಿಶೇಷ ರೈಲುಗಳ ಸೇವೆ ಆರಂಭಿಸಲಾಗಿದೆ. ಇಂದಿನಿಂದ ನವೆಂಬರ್ 30ರವರೆಗೆ ರೈಲುಗಳು ಸಂಚಾರ ಮಾಡಲಿವೆ.

mys
mys

By

Published : Oct 20, 2020, 8:28 PM IST

ಮೈಸೂರು:ದಸರಾ, ದುರ್ಗಾಪೂಜೆ, ದೀಪಾವಳಿ ಮತ್ತು ಛತ್ ಪೂಜೆ ಹಬ್ಬದ ನಿಮಿತ್ತ ಮೈಸೂರಿನಿಂದ ಐದು ವಿಶೇಷ ರೈಲುಗಳ ಸೇವೆ ಆರಂಭಿಸಲಾಗಿದೆ.

ವಿಶೇಷ ರೈಲು ಸೇವೆ ಒದಗಿಸಲು ನೈರುತ್ಯ ರೈಲ್ವೆ ತೀರ್ಮಾನ ಕೈಗೊಂಡಿದ್ದು, ಇಂದಿನಿಂದ ನವೆಂಬರ್ 30ರವರೆಗೆ ರೈಲುಗಳು ಸಂಚಾರ ಮಾಡಲಿವೆ.

ಹಬ್ಬಕ್ಕಾಗಿ ಕಾರ್ಯ ನಿರ್ವಹಿಸುವ ರೈಲುಗಳ ಸಂಚಾರ ಹಬ್ಬದ ನಂತರ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಪ್ರಿಯಾ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಮೈಸೂರು- ಧಾರವಾಡ, ಧಾರವಾಡ-ಮೈಸೂರು, ಮೈಸೂರು- ವಾರಣಾಸಿ, ವಾರಣಾಸಿ- ಮೈಸೂರು, ಅಜ್ಮೇರ್- ಮೈಸೂರು, ಮೈಸೂರು-ಅಜ್ಮೇರ್, ಕಾಚಿಗುಡ-ಮೈಸೂರು, ಮೈಸೂರು-ಕಾಚಿಗುಡ, ದರ್ಭಂಗ-ಮೈಸೂರು, ಮೈಸೂರು-ದರ್ಭಂಗ ನಡುವೆ ರೈಲುಗಳು ಸಂಚಾರ ಮಾಡಲಿವೆ ಎಂದು ಪ್ರಿಯಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details