ಕರ್ನಾಟಕ

karnataka

ETV Bharat / state

ಮೈಸೂರಲ್ಲಿ ದಸರಾ ಸಂಭ್ರಮ: ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಪೂಜೆ

ಅರಮನೆ ಆವರಣದಲ್ಲಿ ಆಯುಧ ಪೂಜೆ ರಂಗೇರಿದೆ. ಈ ಹಿನ್ನೆಲೆ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಆನೆಗಳ ಸಿಂಗರಿಸಿ ಪೂಜೆ ಸಲ್ಲಿಸಲಾಗಿದೆ.

special-puja-performed-for-dasara-elephants-in-mysuru
ಅಭಿಮನ್ಯು ನೇತೃತ್ವದ ಗಜಪಡೆಗೆ ವಿಶೇಷ ಪೂಜೆ

By

Published : Oct 14, 2021, 12:08 PM IST

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಆಯುಧ ಪೂಜೆ ಹಿನ್ನೆಲೆ ಸಾಂಪ್ರದಾಯಿಕವಾಗಿ ಇಂದು ಪೂಜೆ ಸಲ್ಲಿಸಲಾಗಿದೆ.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಅಶ್ವತ್ಥಾಮ, ಲಕ್ಷ್ಮಿ, ಕಾವೇರಿ, ಚೈತ್ರಾ ಆನೆಗಳಿಗೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ನಾಗರಹೊಳೆ ಹುಲಿ ಯೋಜನೆ ಸಿಸಿಎಫ್ ಮಹೇಶ್ ಕುಮಾರ್, ಡಿಸಿಎಫ್‌ ಕರಿಕಾಳನ್, ಕಮಲಾ ಕರಿಕಾಳನ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೂಜೆ ನೆರವೇರಿಸಿದರು.

ದಸರಾ ಗಜಪಡೆಗೆ ವಿಶೇಷ ಪೂಜೆ

ಸೇವಂತಿಗೆ ಹೂವುಗಳಿಂದ ಆನೆಗಳನ್ನು ಸಿಂಗರಿಸಿ, ಕಬ್ಬು, ಬೆಲ್ಲ, ತೆಂಗಿನಕಾಯಿ, ಬಾಳೆಹಣ್ಣು ನೀಡಿ ಪೂಜೆ ನೆರವೇರಿಸಿದ್ದಾರೆ. ‌ಆನೆಗಳ ಅಂಕುಶ, ಗಾದಿ, ಅರಣ್ಯ ಇಲಾಖೆಯ ಬಂದೂಕುಗಳಿಗೂ ಆಯುಧ ಪೂಜೆ ಮಾಡಲಾಯಿತು.

ಉಳಿದಂತೆ ಗೋಪಾಲಸ್ವಾಮಿ ಹಾಗೂ ಧನಂಜಯ ಪಟ್ಟದ ಆನೆಗಳಾಗಿ ರಾಜಮನೆತನದ ಪೂಜೆಯಲ್ಲಿ ಭಾಗವಹಿಸಿದವು.

ಇದನ್ನೂ ಓದಿ:ಮೈಸೂರು ಅರಮನೆಯಲ್ಲಿಂದು ಆಯುಧಪೂಜೆ ಸಂಭ್ರಮ, ನಾಳೆ ಜಗತ್ಪ್ರಸಿದ್ಧ ಜಂಬೂಸವಾರಿ

ABOUT THE AUTHOR

...view details