ಮೈಸೂರು: ಅರಣ್ಯ ಭವನದ ಆವರಣದಲ್ಲಿ ಗಜಪಡೆ ಕ್ಯಾಪ್ಟನ್ ಅಭಿಮನ್ಯು, ಗೋಪಿ, ವಿಕ್ರಮ, ವಿಜಯ, ಕಾವೇರಿ ಆನೆಗಳಿಗೆ ಅಲಂಕಾರಗೊಳಿಸಿ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು.
ನಾಡಹಬ್ಬ ದಸರಾ: ಕ್ಯಾಪ್ಟನ್ ಅಭಿಮನ್ಯು ಜೊತೆ ಗಜಪಡೆಗೆ ವಿಶೇಷ ಪೂಜೆ... - Dasara elephant abhimanyu special pooja
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಅಲಂಕಾರಗೊಳಿಸಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
ಅಂಬಾರಿ ಆನೆ ಅಭಿಮನ್ಯು ಗಜಪಡೆಗೆ ವಿಶೇಷ ಪೂಜೆ.
ವೃತ್ತ ಅರಣ್ಯಾಧಿಕಾರಿ ಹೀರೆಲಾಲ್, ಡಿಸಿಎಫ್ ಗಳಾದ ಅಲೆಗ್ಸಾಂಡರ್, ಡಾ.ಪ್ರಶಾಂತ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಈ ವೇಳೆ ಹಾಜರಿದ್ದರು. ಅರಣ್ಯ ಭವನದಿಂದ ಅರಮನೆ ತಲುಪಿದ ಬಳಿಕ ಗಜಪಡೆಗಳಿಗೆ ವಿಶೇಷ ಆತಿಥ್ಯ ಸಿಗಲಿದೆ.