ಮೈಸೂರು : ಕುಡಿಯಲು ಹಣ ಕೊಟ್ಟಿಲ್ಲವೆಂದು ಮರದ ಪಟ್ಟಿಯಿಂದ ಹೊಡೆದು ಮಗನೇ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ತಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಕುರುಬಾಳನಹುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜೋಗಿ ರಾಮೇಗೌಡರ ಎಂಬವರ ಪತ್ನಿ ಗೌರಮ್ಮ (55) ಕೊಲೆಗೀಡಾಗಿರುವ ಮಹಿಳೆ. ಈಕೆಯ 26 ವರ್ಷದ ಮೂಗ ಮಗ ಶಾಂತರಾಜು ಮದ್ಯ ವ್ಯಸನಿಯಾಗಿದ್ದಾನೆ. ಮನೆಯಲ್ಲಿದ್ದ ಹಣ ಕುಡಿಯಲು ಕೊಟ್ಟಿಲ್ಲವೆಂಬ ಕಾರಣಕ್ಕೆ ಮರದ ಪಟ್ಟಿಯಿಂದ ತಾಯಿಯ ಮುಖಕ್ಕೆ ಹೊಡೆದು, ನಂತರ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾನೆ.