ಮೈಸೂರು:ಇದೇ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ಒಗ್ಗೂಡುತ್ತಿರುವ ಸೋಲಿಗ ಜನಾಂಗದರು, ಇತರೆ ಸಂಘಟನೆಗಳಂತೆ ಒಗ್ಗಟ್ಟಿನ ಮನೋಭಾವನೆ ಬಿತ್ತಿದ್ದಾರೆ.
ರಾಜ್ಯಮಟ್ಟದಲ್ಲಿ ಒಗ್ಗೂಡುವಂತೆ ಸೋಲಿಗರಿಗೆ ಕರೆ - Soliga community
ಇತರೆ ಜನಾಂಗಗಳು ಒಗ್ಗಟ್ಟು ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸೋಲಿಗ ಜನಾಂಗ ರಾಜ್ಯಮಟ್ಟದಲ್ಲಿ ಒಗ್ಗೂಡುತ್ತಿದೆ.
ರಾಜ್ಯಮಟ್ಟದಲ್ಲಿ ಒಗ್ಗೂಡುತ್ತಿರುವ ಸೋಲಿಗ ಜನಾಂಗ
ಹೆಚ್.ಡಿ.ಕೋಟೆ ತಾಲೂಕಿನ ಬಿ.ಮಟಗೆರೆ ಗ್ರಾಮದಲ್ಲಿರುವ ಗಿರಿಜನ ಆಶ್ರಮ ಶಾಲೆಯ ಭವನದಲ್ಲಿ ಬಿಳಿಗಿರಿ ರಂಗನ ಬೆಟ್ಟದಿಂದ ಆಗಮಿಸಿದ್ದ ಜಡೇಗೌಡ ಹಾಗೂ ಮಾದೇಗೌಡ ನೇತೃತ್ವದಲ್ಲಿ 18 ಹಾಡಿಗಳ ನಿವಾಸಿಗಳೊಂದಿಗೆ ಸಭೆ ನಡೆಸಿದರು.
ಇತರೆ ಜನಾಂಗಗಳು ಒಗ್ಗಟ್ಟು ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಯ ಕೆಲ ಭಾಗಗಳಲ್ಲಿ ವಾಸಿಸುತ್ತಿರುವ ಸೋಲಿಗರು ಒಗ್ಗೂಡುವಂತೆ ಮುಖಂಡರು ಮನವಿ ಮಾಡಿಕೊಂಡರು.