ಕರ್ನಾಟಕ

karnataka

ETV Bharat / state

ಆನೆಗಳ ಹಾವಳಿ ತಪ್ಪಿಸಿದ ಸೋಲಾರ್ ತೂಗು ತಂತಿಗಳು - ನುಗು ಜಲಾಶಯ ಸುತ್ತಮುತ್ತ ಸೋಲರ್ ತೂಗು ತಂತಿಗಳ ಅಳವಡಿಕೆ

ನಗು ಜಲಾಶಯವು ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಿಗೆ ಹೊಂದಿಕೊಂಡಿದ್ದು, ಜಲಾಶಯದಲ್ಲಿ ನೀರು ಕುಡಿಯಲು ಬರುತ್ತಿದ್ದ ಆನೆಗಳು ರೈತರು ಬೆಳೆದ ಬೆಳೆಯನ್ನು ನಾಶ ಮಾಡುತ್ತಿದ್ದರು. ಇದನ್ನರಿತ ಅರಣ್ಯ ಇಲಾಖೆ ಅಧಿಕಾರಿಗಳು ಜಲಾಶಯದ ಸುತ್ತಮುತ್ತ ಸೋಲಾರ್ ತೂಗು ತಂತಿಗಳು ಅಳವಡಿಸುವ ಮೂಲಕ ಆನೆ ಹಾವಳಿಯನ್ನು ತಡೆದಿದ್ದಾರೆ.

ಸೋಲರ್ ತೂಗು ತಂತಿಗಳು
Solar hanging wires

By

Published : Jan 31, 2021, 10:52 AM IST

ಮೈಸೂರು: ಸೋಲಾರ್ ತೂಗು ತಂತಿಗಳು ಅಳವಡಿಸಿದ ಪರಿಣಾಮ ನುಗು ಜಲಾಶಯ ಸುತ್ತಮುತ್ತ ಇರುವ ಗ್ರಾಮಗಳಲ್ಲಿ ಆನೆಗಳ ಹಾವಳಿ ಕಡಿಮೆಯಾಗಿದೆ.

ಆನೆಗಳ ಹಾವಳಿ ತಪ್ಪಿಸಿದ ಸೋಲಾರ್ ತೂಗು ತಂತಿಗಳು

ನಗು ಜಲಾಶಯವು ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಿಗೆ ಹೊಂದಿಕೊಂಡಿದ್ದು, ಜಲಾಶಯದಲ್ಲಿ ನೀರು ಕುಡಿಯಲು ಬರುವ ಆನೆಗಳು ಜಮೀನುಗಳಿಗೆ ನುಗ್ಗಿ ಫಸಲನ್ನು ತಿಂದು ನಾಶ ಪಡಿಸುತ್ತಿದ್ದವು. ಆನೆಗಳ ಹಾವಳಿ ತಪ್ಪಿಸಿ ಬೆಳೆ ಸಂರಕ್ಷಣೆ ಮಾಡಿ ಎಂದು ಸುತ್ತಮುತ್ತಲ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಹಲವು ಮನವಿ ಮಾಡಿದ್ದರು.

ಅದರಂತೆ ನುಗು ಜಲಾಶಯ ಹಿನ್ನೀರಿನ ಪ್ರದೇಶ ಸುತ್ತಮುತ್ತ ಹಳ್ಳ ಹೊಡೆದು ಆನೆ ಕಂಬಗಳನ್ನು ಹಾಕಲಾಯಿತು. ಆದರೆ ಕಿಲಾಡಿ‌ ಆನೆಗಳು ಕಂಬಗಳನ್ನು ದಾಡಿ ಬುದ್ಧಿವಂತಿಕೆಯಿಂದ ಬರುತ್ತಿದ್ದವು. ಮತ್ತಷ್ಟು ತಲೆಕೆಡಿಸಿಕೊಂಡು ಅರಣ್ಯಾಧಿಕಾರಿಗಳು ನುಗು ಜಲಾಶಯದ ಹಿನ್ನೀರಿನ ಪ್ರದೇಶಗಳ ಸುತ್ತ ತೂಗು ಸೋಲಾರ್ ತಂತಿಗಳನ್ನು ಅಳವಡಿಸಿದರು. ಇದರಿಂದ ಆನೆಗಳಿಗೆ ವಿದ್ಯುತ್ ಸ್ಪರ್ಶದ ಅನುಭವವಾಗಿ ಹಿನ್ನೀರಿನಲ್ಲಿ ನೀರು ಕುಡಿದು ವಾಪಸ್ ಕಾಡಿಗೆ ತೆರಳುತ್ತಿವೆ.

ಹೆಗ್ಗುಡಿಲು, ಹೊಸಹೆಗ್ಗುಡಿಲು, ಚನ್ನಿಪುರ, ಹುಲ್ಲೇಮಾಳ, ನೆರಳಹುಂಡಿ, ಪುರದ ಕಾಲೋನಿ, ಹಲಸೂರು, ಚಾಮಲಪುರ, ಮಧುವಿನಹಳ್ಳಿ, ಕೆಲ್ಲುಪುರ, ಅರಿಯೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ‌ ಆನೆಗಳ‌ ಹಾವಳಿ ಕಡಿಮೆಯಾಗಿದೆ.

For All Latest Updates

ABOUT THE AUTHOR

...view details