ಕರ್ನಾಟಕ

karnataka

ETV Bharat / state

ಬ್ರಾಹ್ಮಣರನ್ನು ನಂಬಬೇಡಿ ಎಂಬ ಪದ ಬಳಕೆ ಬಗ್ಗೆ ನನಗೆ ವಿಷಾದವಿದೆ: ಪ ಮಲ್ಲೇಶ್ - ಬ್ರಾಹ್ಮಣರನ್ನು ನಂಬಬೇಡಿ ಎಂಬ ಪದ ಬಳಕೆ

ಬ್ಯಾಹ್ಮಣರನ್ನು ಮತ್ತು ಬ್ರಾಹ್ಮಣಿಕೆಯನ್ನು ನಂಬಬೇಡಿ ಎಂಬ ಹೇಳಿಕೆ ವಿಚಾರವಾಗಿ ಚಿಂತಕ ಪ.ಮಲ್ಲೇಶ್, ನಾನು ಆ ಪದ ಬಳಕೆ ಮಾಡಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

KN_MYS
ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಪ ಮಲ್ಲೇಶ್​

By

Published : Nov 18, 2022, 5:48 PM IST

ಮೈಸೂರು: ನಾನು ಬ್ರಾಹ್ಮಣರನ್ನು ಮತ್ತು ಬ್ರಾಹ್ಮಣಿಕೆಯನ್ನು ನಂಬಬೇಡಿ ಎಂಬ ಪದ ಬಳಕೆಯನ್ನು ಉಪಯೋಗಿಸಬಾರದಿತ್ತು ಎಂಬ ವಿಷಯದಲ್ಲಿ ವಿಷಾದವಿದೆ ಎಂದು ಚಿಂತಕ ಪ.ಮಲ್ಲೇಶ್ ತಾವು ಬಳಸಿದ ಪದದ ಬಗ್ಗೆ ಕ್ಷಮೆ ರೀತಿಯಲ್ಲಿ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಚಿಂತಕ ಹಾಗೂ ಸಿದ್ದರಾಮಯ್ಯ ಅವರ ಆಪ್ತರಾದ ಪ.ಮಲ್ಲೇಶ್, ತಾವು ನ.15 ರಂದು ಕಾರ್ಯಕ್ರಮವೊಂದರಲ್ಲಿ ಬ್ರಾಹ್ಮಣರನ್ನು ಮತ್ತು ಬ್ರಾಹ್ಮಣಿಕೆಯನ್ನು ನಂಬಬೇಡಿ ಎಂಬ ಪದವನ್ನು ಬಳಸಿದ್ದು, ಈ ವಿಚಾರದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಅವಮಾನವಾಗಿದೆ ಎಂದು ನನ್ನ ವಿರುದ್ಧ ಬ್ರಾಹ್ಮಣ ಸಂಘದವರು ಕುವೆಂಪು ನಗರ ಠಾಣೆಯಲ್ಲಿ ದೂರು ನೀಡಿದ್ದರು.

ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಪ ಮಲ್ಲೇಶ್​

ಆ ಪದ ಬಳಕೆ ಉಪಯೋಗಿಸಿದ ತಕ್ಷಣವೇ ನನಗೆ ಅನಿಸಿತ್ತು, ಈ ಪದವನ್ನು ಉಪಯೋಗಿಸಬಾರದಿತ್ತು ಎಂದು. ಇದರ ಬಗ್ಗೆ ಮೊದಲ ದಿನವೇ ವಿಷಾದ ವ್ಯಕ್ತಪಡಿಸಿದ್ದೇನೆ. ಈ ವಿಚಾರದ ಬಗ್ಗೆ ಕಾನೂನು ಮತ್ತು ಪೊಲೀಸರು ಗಮನ ಹರಿಸಬೇಕು. ಇದರ ಬಗ್ಗೆ ಹೋರಾಟ ಮಾಡುತ್ತೇನೆ ಎಂಬ ಸಮುದಾಯದವರ ನಿಲುವು ನಾನು ಅವರಿಗೆ ಬಿಡುತ್ತೇನೆ ಎಂದು ತಾವು ಆಡಿದ ಮಾತಿಗೆ ವಿಷಾದ ಮತ್ತು ಕ್ಷಮೆಯಿದೆ ಎಂದು ಪ.ಮಲ್ಲೇಶ್ ಒಪ್ಪಿಕೊಂಡರು.

ಮುಂದುವರಿದು ನನಗೆ ವೇದಗಳು ಮತ್ತು ಉಪನಿಷತ್ತುಗಳ ಬಗ್ಗೆ ಗೊತ್ತಿದೆ. ದೇವರ ಪರಿಕಲ್ಪನೆ ಅವರದ್ದು, ನಾವು ದೇವರ ಪರಿಕಲ್ಪನೆಯನ್ನು ಹೊಂದಿಲ್ಲ. ಪರಮಹಂಸ, ವಿವೇಕಾನಂದ ಯಾರಿಗೂ ದೇವರು ಎಲ್ಲಿದ್ದಾನೆ ಎಂಬುದು ಗೋತ್ತಿಲ್ಲ. ಈ ದೇಶದಲ್ಲಿ ದೇವರನ್ನು ಸೃಷ್ಟಿಮಾಡಿ, ನಮ್ಮನ್ನೆಲ್ಲ ಗುಲಾಮರನ್ನಾಗಿ ಮಾಡಿದ ಸಮಾಜ ಅದು. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮನ್ನು ಯಾವುದೇ ಕೆಲಸಕ್ಕೆ ಬಾರದ ರೀತಿಯಲ್ಲಿ ನಡೆಸಿಕೊಂಡ ಆ ಸಮಾಜವನ್ನ ನಾವು ಸಹಿಸಿಕೊಂಡಿದ್ದೇವೆ.

ನಾವು ತಿರುಗಿ ಬಿದ್ದಿಲ್ಲ, ನಾವು ತಿರುಗಿ ಬಿದ್ದರೆ ಅವರು ಉಳಿಯುವುದಿಲ್ಲ ಎಂದು ಆ ವಿಚಾರವನ್ನು ಮುಂದುವರೆಸಬಾರದು ಎಂದು ಪರೋಕ್ಷವಾಗಿ ಮಾತಿನ ಮೂಲಕ ಪ.ಮಲ್ಲೇಶ ವಿವರಿಸಿದರು.

ಇದನ್ನೂ ಓದಿ:ಮಾಜಿ ಸಿಎಂ ಸಿದ್ದರಾಮಯ್ಯ ಪರಮಾಪ್ತನ ವಿರುದ್ಧ ದೂರು ದಾಖಲು

ABOUT THE AUTHOR

...view details