ಮೈಸೂರು: ಮೈಸೂರು ಭಾಗದಲ್ಲಿ ಇನ್ನೂ ಕೂಡ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಠ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದಕ್ಕೆ ನಿದರ್ಶನ ಎಂಬಂತೆ ವೈಯಕ್ತಿಕ ದ್ವೇಷದಿಂದ ಗ್ರಾಮದ ಕೆಲವು ಮುಖಂಡರು ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ್ದಾರೆ.
ನಮಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಈ ಬಹಿಷ್ಕಾರವನ್ನು ಕೊನೆಗೊಳಿಸಿ ಎಂದು ಕುಟುಂಬದವರು ಮನವಿ ಮಾಡಿದ್ದಾರೆ. ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದ ಮಹದೇವಪ್ಪ ಕುಟುಂಬ ಈ ಅನಿಷ್ಠ ಪದ್ಧತಿಗೆ ಒಳಗಾಗಿದೆ. ಈ ಕುಟುಂಬಕ್ಕೆ ಅದೇ ಗ್ರಾಮದ ಕೆಲವು ರೈತ ಸಂಘದ ಮುಖಂಡರು ವೈಯಕ್ತಿಕ ದ್ವೇಷಕ್ಕಾಗಿ ಕಳೆದ 45 ದಿನಗಳಿಂದ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದ ಯಾರೂ ಸಹ ಇವರ ಜೊತೆ ಮಾತನಾಡುವಂತಿಲ್ಲ, ಕೆಲಸಕ್ಕೆ ಹೋಗುವಂತಿಲ್ಲ, ಇವರ ಜೊತೆ ಯಾವುದೇ ವ್ಯವಹಾರ ಮಾಡುವಂತಿಲ್ಲ ಎಂದು ಗ್ರಾಮದ ಮುಖಂಡರು ಈ ಕುಟುಂಬಕ್ಕೆ ಪಂಚಾಯಿತಿ ಮಾಡಿ ಬಹಿಷ್ಕಾರ ಹಾಕಿದ್ದಾರೆ.