ಕರ್ನಾಟಕ

karnataka

ETV Bharat / state

ದೇಶದ ಮೊದಲ ಬಾಲಕಿಯರ ಶಾಲೆ ಕೆಡವಿ ಸ್ಮಾರಕ ನಿರ್ಮಾಣ: ಸೂಕ್ತ ಮಾಹಿತಿ ಕೋರಿ ರಾಮಕೃಷ್ಣ ಆಶ್ರಮಕ್ಕೆ ಪತ್ರ - ರಾಮಕೃಷ್ಣ ಆಶ್ರಮ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ದೇಶದ ಮೊದಲ ಮಹಿಳಾ ಸರ್ಕಾರಿ ಬಾಲಕಿಯರ ಶಾಲೆಯನ್ನು ಕೆಡವಿ ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಲು ಸಿದ್ಧವಾಗಿರುವ ರಾಮಕೃಷ್ಟ ಆಶ್ರಮಕ್ಕೆ ಸಾಮಾಜಿಕ ಹೋರಾಟಗಾರ ಕೃಷ್ಣ ಪತ್ರ ಬರೆದಿದ್ದು, ನಿರಂಜನ ಮಠದಲ್ಲಿ ಸ್ವಾಮಿ ವಿವೇಕಾನಂದರು ಉಳಿದುಕೊಂಡಿದ್ದರು ಎಂಬುವುದಕ್ಕೆ ಸಾಕ್ಷ್ಯಗಳಿದ್ದರೆ ನೀಡಿ ಎಂದು ತಿಳಿಸಿದ್ದಾರೆ.

social-activist-krishna-wrote-letter-to-mysore-ramakrishna-ashrama
ರಾಮಕೃಷ್ಣ ಆಶ್ರಮಕ್ಕೆ ಪತ್ರ

By

Published : Jul 22, 2021, 7:42 PM IST

ಮೈಸೂರು: ನಿರಂಜನ ಮಠದಲ್ಲಿ ಸ್ವಾಮಿ ವಿವೇಕಾನಂದರು ಉಳಿದುಕೊಂಡಿದ್ದರು ಎಂಬ ಬಗ್ಗೆ ನಿಮ್ಮಲ್ಲಿ‌ ಸಾಕ್ಷ್ಯಾಧಾರಗಳು ಇದ್ದರೆ ನೀಡಿ ಎಂದು ಸಾಮಾಜಿಕ ಹೋರಾಟಗಾರ ಕೃಷ್ಣ ಎಂಬವರು ಮೈಸೂರಿನ‌ ರಾಮಕೃಷ್ಣ ಆಶ್ರಮಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸಾಮಾಜಿಕ ಹೋರಾಟಗಾರ ಕೃಷ್ಣ ಅವರನ್ನು ನಮ್ಮ ಪ್ರತಿನಿಧಿ ಮಾತನಾಡಿಸಿದರು.

ಈ ಬಗ್ಗೆ ಸಾಕ್ಷ್ಯಗಳಿಲ್ಲದೆ ಒದಗಿಸಿ, ಇಲ್ಲವಾದರೆ ವಂಚನೆ ಆರೋಪ‌ ಹಾಗೂ ಸುಳ್ಳು ಮಾಹಿತಿ‌ ನೀಡಿದ್ದೀರಿ ಎಂದು ಮೊಕದ್ದಮೆ ದಾಖಲಿಸಲಾಗುವುದು ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಆಶ್ರಮದವರು ಇದುವರೆಗೂ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಸರ್ಕಾರಿ ಶಾಲೆಯಿರುವ ಜಮೀನನ್ನು ಕಬಳಿಸುವ ಉದ್ದೇಶದಿಂದ ನ್ಯಾಯಾಲಯ ಹಾಗೂ ಸರ್ಕಾರಕ್ಕೆ ಸುಳ್ಳು ಮಾಹಿತಿ‌ ನೀ‌ಡಿದ್ದಾರೆ ಅನ್ನೋದು ಸ್ಪಷ್ಟವಾಗುತ್ತಿದೆ ಎಂದು ಕೃಷ್ಣ ಆರೋಪಿಸಿದರು.

1892ರಲ್ಲಿ ಮೈಸೂರಿಗೆ ಸ್ವಾಮಿ‌ ವಿವೇಕಾನಂದರು ಬಂದಿದ್ದು, ಆಗಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಮನೆಯಲ್ಲಿ ಉಳಿದುಕೊಂಡಿದ್ದರು. ಅದು ಈಗಿನ ಶಾಲೆಯ ಹಿಂಭಾಗದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಆಗಿದೆ. ಆದ್ರೆ ರಾಮಕೃಷ್ಣ ಆಶ್ರಮದವರು ತಮ್ಮ ಮಠದಲ್ಲಿ ಉಳಿದುಕೊಂಡಿದ್ದರು ಎಂದು ಜನರಿಗೆ ಸುಳ್ಳು ಮಾಹಿತಿ‌ ನೀಡಿದ್ದಾರೆ. ವಿವೇಕಾನಂದರು ಶೇಷಾದ್ರಿ ಅಯ್ಯರ್ ಮನೆಯಲ್ಲಿ 3-4 ವಾರಗಳ ಕಾಲ ಉಳಿದುಕೊಂಡಿದ್ದರು ಎಂಬುದಕ್ಕೆ ಸರ್ಕಾರಿ ದಾಖಲೆಗಳೇ ಸ್ಪಷ್ಟ ಮಾಹಿತಿ ನೀಡುತ್ತಿವೆ ಎಂದು ಕೃಷ್ಣ ಹೇಳುತ್ತಾರೆ.

ABOUT THE AUTHOR

...view details