ಕರ್ನಾಟಕ

karnataka

ETV Bharat / state

ಮನೆ ಮಾಲೀಕರಿಗೆ ತಿಂಗಳಿಂದ ಕಾಟ ಕೊಟ್ಟಿದ್ದ ನಾಗರಾಜ ಕೊನೆಗೂ ಸೆರೆ - ಹಿತ್ತಲ ಮನೆಯಲಿದ್ದ ನಾಗರ ಹಾವು ಸೆರೆ

ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಸೇರಿಕೊಂಡು ಭೀತಿ ಹುಟ್ಟಿಸಿದ್ದ ನಾಗರ ಹಾವು ಕೊನೆಗೂ ಸೆರೆ ಸಿಕ್ಕಿದೆ. ನಾಗರಾಜನ ಕಾಟಕ್ಕೆ ಮನೆ ತೊರೆಯಲು ನಿರ್ಧರಿಸಿದ ಚುಂಚರಾಯನ ಹುಂಡಿ ಗ್ರಾಮದ ಕುಟುಂಬ ಸದ್ಯ ನಿಟ್ಟುಸಿರು ಬಿಟ್ಟಿದೆ.

snake-caught-after-one-month-in-cuncharayan-hundi
ನಾಗರ ಹಾವು ಸೆರೆ

By

Published : Aug 21, 2020, 10:04 PM IST

ಮೈಸೂರು: ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಸೇರಿಕೊಂಡು ತಿಂಗಳಿನಿಂದ ಮನೆ ಮಾಲೀಕನಿಗೆ ಕಾಟ ಕೊಡುತ್ತಿದ್ದ ನಾಗರಹಾವನ್ನು ಕೊನೆಗೂ ಸೆರೆಹಿಡಿಯಲಾಗಿದೆ.

ಮನೆ ಮಾಲೀಕರಿಗೆ ತಿಂಗಳಿಂದ ಕಾಟ ಕೊಟ್ಟಿದ್ದ ನಾಗರಾಜ ಕೊನೆಗೂ ಸೆರೆ

ಮೈಸೂರಿನ ಹೊರವಲಯದ ಚುಂಚರಾಯನ ಹುಂಡಿ ಗ್ರಾಮದ ಸ್ವಾಮಿ ಎಂಬುವರ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ನಾಗರ ಹಾವೊಂದು ಸೇರಿಕೊಂಡು, ಆಗಾಗ ಮನೆಗೆ ಎಂಟ್ರಿ ಕೊಟ್ಟು ಕ್ಷಣದಲ್ಲೇ ಮಾಯವಾಗುತ್ತಿತ್ತು. ಇದರಿಂದ ಹೆದರಿದ್ದ ಮನೆಯವರು ಮನೆ ತೊರೆಯಲು ನಿರ್ಧರಿಸಿದ್ದರು.

ಕೊನೆಯ ಪ್ರಯತ್ನ ಎಂಬಂತೆ ಮೈಸೂರಿನ ಸ್ನೇಕ್ ರಮೇಶನಿಗೆ ಕರೆ ಮಾಡಿದ್ದರು. ಇಂದು ಮನೆಗೆ ಬಂದ ಸ್ನೇಕ್ ರಮೇಶ್ 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿಯಲು ಯಶಸ್ವಿಯಾದರು. ಹಾವನ್ನು ಹಾರೋಹಳ್ಳಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.

ABOUT THE AUTHOR

...view details