ಕರ್ನಾಟಕ

karnataka

ETV Bharat / state

ಮೊದಲ ಬಾರಿ ಮಾವ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರಕ್ಕಿಳಿದ ಸೊಸೆ - smita rakesh siddaramaiah election campaign

ವರುಣಾ ಕ್ಷೇತ್ರದಲ್ಲಿ ಮಾವ ಸಿದ್ದರಾಮಯ್ಯ ಪರ ಮೊದಲ ಬಾರಿಗೆ ಸೊಸೆ ಸ್ಮಿತಾ ರಾಕೇಶ್ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

smita rakesh siddaramaiah
ಸ್ಮಿತಾ ರಾಕೇಶ್ ಸಿದ್ದರಾಮಯ್ಯ

By

Published : Apr 27, 2023, 12:03 PM IST

ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ಮಾಡಿದ ಸ್ಮಿತಾ ರಾಕೇಶ್ ಸಿದ್ದರಾಮಯ್ಯ

ಮೈಸೂರು: ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸೋಮಣ್ಣನ ಪರ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಸೊಸೆ ಸ್ಮಿತಾ ರಾಕೇಶ್ ಸಿದ್ದರಾಮಯ್ಯ ಮಾವನ ಪರ ಪ್ರಚಾರ ಕೈಗೊಂಡಿದ್ದು, ವರುಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಮತಯಾಚನೆ ನಡೆಸುತ್ತಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಕಳೆದ 15 ವರ್ಷಗಳಿಂದ ಶಾಸಕರಾಗಿ ಆಯ್ಕೆ ಆಗುತ್ತಿದ್ದಾರೆ. ವರುಣಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾಗಿ ಹಾಗೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ನಂತರ ಕಳೆದ ಬಾರಿ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಆಯ್ಕೆಯಾಗಿದ್ದು, ಈಗ ಶಾಸಕರಾಗಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯತೀಂದ್ರ ಅವರು ತಂದೆಗೆ ಮತ್ತೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು, ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯಾದ ನಂತರ ಒಂದು ದಿನ 16 ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ಮತ್ತೆ ಎರಡು ದಿನ ಪ್ರಚಾರಕ್ಕೆ ಆಗಮಿಸುತ್ತೇನೆ ಎಂದು ಹೇಳಿದ್ದಾರೆ.

ಮಾವನ ಪರ ಸೊಸೆ ಪ್ರಚಾರ :ಈ ವರೆಗೆ ಸಿದ್ದು ಕುಟುಂಬದಲ್ಲಿ ಗಂಡು ಮಕ್ಕಳನ್ನು ಬಿಟ್ಟರೆ ಅವರ ಪತ್ನಿ ಹಾಗೂ ಸೊಸೆ ಎಂದೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಮೊದಲ ಬಾರಿಗೆ ಮಾವನ ಪರವಾಗಿ ರಾಕೇಶ್ ಸಿದ್ದರಾಮಯ್ಯ ಪತ್ನಿ ಸ್ಮಿತಾ ರಾಕೇಶ್ ವರುಣಾ ಕ್ಷೇತ್ರದ ತಾಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಮನೆ ಮನೆಗೆ ಹೋಗಿ, ಕಾಂಗ್ರೆಸ್​ಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ.​ ಮತ್ತೆ ಮಾವ ಸಿಎಂ ಆಗುತ್ತಾರೆ, ತಾವು ದಯವಿಟ್ಟು ಮತ ನೀಡಿ ಎಂದು ವಿನಂತಿ ಮಾಡುತ್ತಿದ್ದಾರೆ.

ಇದನ್ನೂ ಓದಿ :ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ನನ್ನನ್ನು ರಾಜಕೀಯ ದ್ವೇಷದಿಂದ ಸೋಲಿಸಬೇಕೆಂದು ನಿಂತಿದ್ದಾರೆ : ಸಿದ್ದರಾಮಯ್ಯ

ಇದರ ಜೊತೆಗೆ, ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮೊದಲ ಬಾರಿಗೆ ಸ್ಮಿತಾ ರಾಕೇಶ್ ಸಿದ್ದರಾಮಯ್ಯ ಮಗ 17 ವರ್ಷದ ಧವನ್ ರಾಕೇಶ್ ನನ್ನು ಮಾಜಿ ಸಿಎಂ ಸಿದ್ದರಾಮಯ್ಯನವರೇ ಸ್ವತಃ ಸಾರ್ವಜನಿಕ ಸಭೆಯಲ್ಲಿ" ಮುಂದೆ ಈತ ರಾಜಕೀಯಕ್ಕೆ ಬರುತ್ತಾನೆ" ಎಂದು ಪರಿಚಯ ಮಾಡಿಕೊಟ್ಟಿದ್ದರು.

ಚುನಾವಣಾ ಪ್ರಚಾರ ನಡೆಸಿದ ಸೋಮಣ್ಣ

ಇದನ್ನೂ ಓದಿ :'ಮೊಮ್ಮಗ ಧವನ್ ರಾಕೇಶ್ ನನ್ನ ಉತ್ತರಾಧಿಕಾರಿ' : ಸಿದ್ದರಾಮಯ್ಯ ಘೋಷಣೆ

ಸೋಮಣ್ಣ ಅಬ್ಬರದ ಪ್ರಚಾರ: ಈ ಬಾರಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಪ್ರತಿ ಗ್ರಾಮಗಳಿಗೂ ಮೆರವಣಿಗೆ ಮೂಲಕ ಹೋಗಿ ಮತಯಾಚಿಸುತ್ತಿದ್ದು, ನಾನು ಗೆದ್ದರೆ ವರುಣಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಎಳೆದುಕೊಂಡು ಹೋಗುತ್ತೇನೆ ಎಂದು ಹೇಳುವ ಮ‌ೂಲಕ ವರುಣಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಜಯಗಳಿಸಲು ಬೇಕಾದ ಎಲ್ಲಾ ತಂತ್ರಗಳನ್ನ ಮಾಡುತ್ತಿದೆ.

ಇದನ್ನೂ ಓದಿ :ಮೈಸೂರು : ಮೊಮ್ಮಗನ ಜೊತೆ ಬಂದ ಸಿದ್ದರಾಮಯ್ಯ

ABOUT THE AUTHOR

...view details