ಮೈಸೂರು :ಹುಣಸೂರು ಉಪ ಚುನಾವಣೆಗೆ 6 ಕಡೆ ಚೆಕ್ ಪೋಸ್ಟ್ ತೆರೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದರು.
ಹುಣಸೂರು ಉಪ ಚುನಾವಣೆಗೆ ಆರು ಕಡೆ ಚೆಕ್ ಪೋಸ್ಟ್ : ಎಸ್ಪಿ ರಿಷ್ಯಂತ್ - Mysuru Six Check Post For Hunsuru by election
ಹುಣಸೂರು ಉಪಚುನಾವಣೆಯನ್ನು ಕಟ್ಟು ನಿಟ್ಟಾಗಿ ನಡೆಸಲು ತಾಲೂಕಿನ ಮನುಗನಹಳ್ಳಿ, ವೀರನ ಹೊಸಹಳ್ಳಿ, ಚಿಲ್ಕುಂದ, ಗೌಡನಗೆರೆ, ಮುತ್ತುರಾಯನ ಹೊಸಹಳ್ಳಿ ಹಾಗೂ ದೊಡ್ಡಕೊಪ್ಪಲುಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ತಿಳಿಸಿದರು.
ಈ ಬಗ್ಗೆ ಮಾತಾನಾಡಿ, ಉಪ ಚುನಾವಣೆಯನ್ನು ಕಟ್ಟು ನಿಟ್ಟಾಗಿ ನಡೆಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗುವುದು. ಹುಣಸೂರು ಕ್ಷೇತ್ರಕ್ಕೆ ಮಾತ್ರ ನೀತಿ ಸಂಹಿತೆ ಅನ್ವಯಿಸುವುದರಿಂದ ಎಲ್ಲಾ ರೀತಿಯ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, 6 ಕಡೆ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗುವುದು 5 ಫ್ಲೈಯಿಂಗ್ ಸ್ಕ್ವಾಡ್, 6 ಸಿಪಿಐ ಮೊಬೈಲ್ ಸ್ಕ್ವಾಡ್, 21 ಸ್ಪೆಕ್ಟರ್ ಮೊಬೈಲ್ ಸ್ಕ್ವಾಡ್ ಗಳು ಉಪ ಚುನಾವಣೆ ನಡೆಯುವ ಸ್ಥಳಗಳಲ್ಲಿ ಪ್ರತಿದಿನ ಓಡಾಟ ನಡೆಸಲಿದ್ದು, ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಭದ್ರತೆಗಾಗಿ 1 ಸಾವಿರ ಪೊಲೀಸರು 950 ಸಿ.ಆರ್.ಪಿ.ಎಫ್, ಕೆ.ಎಸ್.ಆರ್.ಪಿ ಮತ್ತು ಡಿ.ಆರ್. ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದರು.
ಚುನಾವಣಾ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳು ಹಾಗೂ ಈಗಾಗಲೇ ಪ್ರಕರಣ ಇರುವವರ ಮೇಲೆ ತೀವ್ರ ನಿಗಾ ಇಡಲಾಗುವುದು. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುವುದು. ತಾಲೂಕಿನ ಮನುಗನಹಳ್ಳಿ, ವೀರನ ಹೊಸಹಳ್ಳಿ, ಚಿಲ್ಕುಂದ, ಗೌಡನಗೆರೆ, ಮುತ್ತುರಾಯನ ಹೊಸಹಳ್ಳಿ ಹಾಗೂ ದೊಡ್ಡಕೊಪ್ಪಲುಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.