ಮೈಸೂರು:ಸಿಡಿ ಪ್ರಕರಣದಲ್ಲಿ ಸ್ಕ್ರಿಪ್ಟ್ ರೈಟರ್, ಫೈನಾನ್ಸರ್ ಹಾಗೂ ಪ್ರೊಡ್ಯೂಸರ್ ಯಾರು ಮತ್ತು ಲೋಕೆಶನ್ ಯಾವುದು ಎಂಬುವುದು ಎಸ್ಐಟಿ ತನಿಖೆಯಲ್ಲಿ ಗೊತ್ತಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣವನ್ನು ಎಸ್ಐಟಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಸ್ಕ್ರಿಪ್ಟ್ ರೈಟರ್, ಫೈನಾನ್ಸರ್ ಹಾಗೂ ಪ್ರೊಡ್ಯೂಸರ್ ಯಾರು ಮತ್ತು ಲೋಕೆಶನ್ ಯಾವುದು ಎಂಬುವುದು ತನಿಖೆಯಿಂದ ಗೊತ್ತಾಗಲಿದೆ. ಸಿಡಿ ಹಿಂದಿನ ಮಹಾನ್ ನಾಯಕ ಯಾರು ಎಂಬ ವಿಚಾರವೂ ಬೇಗನೇ ಬಹಿರಂಗ ಆಗಲಿದೆ ಎಂದರು.