ಕರ್ನಾಟಕ

karnataka

ETV Bharat / state

ಲಾಕ್​​ಡೌನ್​​ ಎಫೆಕ್ಟ್​​: ಚಾಮುಂಡಿ ಬೆಟ್ಟದಲ್ಲಿ ಸರಳ ವಸಂತೋತ್ಸವ ಪೂಜೆ - ಚಾಮುಂಡೇಶ್ವರಿ ದೇವಿಯ ವಸಂತೋತ್ಸವ

ಲಾಕ್​ಡೌನ್ ಹಿನ್ನೆಲೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ವಸಂತೋತ್ಸವ ಪೂಜೆಯನ್ನು ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಸರಳವಾಗಿ ನಡೆಸಲಾಯಿತು.

Simple spring fest in Chamundi Hill
ಚಾಮುಂಡಿ ಬೆಟ್ಟದಲ್ಲಿ ಸರಳ ವಸಂತೋತ್ಸವ

By

Published : Apr 8, 2020, 11:28 PM IST

ಮೈಸೂರು: ಕಳೆದ 3 ದಿನಗಳಿಂದ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ವಸಂತೋತ್ಸವ ಪೂಜೆಯನ್ನು ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಸರಳವಾಗಿ ನಡೆಸಲಾಯಿತು.

ಲಾಕ್​​ಡೌನ್ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಬೆಟ್ಟದ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದೆ. ಇನ್ನೊಂದು ಬಾಗಿಲಿನ ಮೂಲಕ ದೇವಾಲಯಕ್ಕೆ ಅರ್ಚಕರು ಪ್ರವೇಶ ಮಾಡಿ, ಚಾಮುಂಡಿ ತಾಯಿಯ ಮೂಲ ಮೂರ್ತಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ಪ್ರತಿದಿನವೂ ತಪ್ಪದೆ ನೆರವೇರಿಸುತ್ತಿದ್ದಾರೆ.

ಇನ್ನು ಕಳೆದ ಸೋಮವಾರದಿಂದ ದೇವಸ್ಥಾನದ ಒಳಗೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಗೆ ವಸಂತೋತ್ಸವದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಅರ್ಚಕರು, ನಾಡಿಗೆ ಬಂದಿರುವ ಸಂಕಷ್ಟವನ್ನು ಪರಿಹರಿಸುವಂತೆ ಪ್ರಾರ್ಥಿಸಿದ್ದಾರೆ.

ABOUT THE AUTHOR

...view details