ಕರ್ನಾಟಕ

karnataka

ETV Bharat / state

ಅಂಬೇಡ್ಕರ್ ಜಯಂತಿಯಂದೇ ಸರಳವಾಗಿ ಸಪ್ತಪದಿ ತುಳಿದ ಜೋಡಿಹಕ್ಕಿ - ಡಾ.ಬಿ.ಆರ್.ಅಂಬೇಡ್ಕರ್

ನಂಜನಗೂಡು ಪಟ್ಟಣದ ಮಂಜುನಾಥ್ ಮತ್ತು ಹೆಚ್.ಡಿ.ಕೋಟೆ ತಾಲೂಕಿನ ಹಂಪಾಪುರ ಗ್ರಾಮದ ಪೂಜಾ ಅಂಬೇಡ್ಕರ್ ಪುತ್ಥಳಿ ಮುಂದೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸರಳ ವಿವಾಹ

By

Published : Apr 14, 2019, 10:44 PM IST

ಮೈಸೂರು:ಪರಸ್ಪರ ಪ್ರೀತಿಸಿದ ಒಂದು ಯುವಜೋಡಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 128ನೇ ಜಯಂತಿಯಂದು ಸರಳವಾಗಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಂಜನಗೂಡು ಪಟ್ಟಣದ ಮಂಜುನಾಥ್ ಮತ್ತು ಹೆಚ್.ಡಿ. ಕೋಟೆ ತಾಲೂಕಿನ ಹಂಪಾಪುರ ಗ್ರಾಮದ ಪೂಜಾ ಅಂಬೇಡ್ಕರ್ ಪುತ್ಥಳಿ ಮುಂದೆ ಸರಳ ವಿವಾಹವಾದವರು. ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು ತಮ್ಮಿಚ್ಛೆಯಂತೆಯೇ ಅಂಬೇಡ್ಕರ್​ ಜಯಂತಿಯಂದು ಹಾರ ಬದಲಾಯಿಸಿಕೊಂಡಿದ್ದಾರೆ.

ಅಂಬೇಡ್ಕರ್ ಪುತ್ಥಳಿ ಎದುರು ಸರಳವಾಗಿ ಸಪ್ತಪದಿ ತುಳಿದ ಜೋಡಿಹಕ್ಕಿ

ತಾಲೂಕು ದಂಡಾಧಿಕಾರಿ ಮಹೇಶ್ ಕುಮಾರ್, ತಾಲೂಕು ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ವಿವಿಧ ಪದಾಧಿಕಾರಿಗಳು ಭಾಗಿಯಾಗಿ ನವಜೋಡಿಗೆ ಆಶೀರ್ವಾದ ಮಾಡಿದರು.

ABOUT THE AUTHOR

...view details