ಮೈಸೂರು: ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸಲು ಮುಂದಾಗಿದೆ. ಇದಕ್ಕಾಗಿ ಮಾರ್ಗಸೂಚಿಯನ್ನೂ ಪ್ರಕಟಿಸಿದೆ. ಆದರೆ ದಸರಾವನ್ನೇ ನಂಬಿದ್ದ ಹಲವು ಉದ್ಯಮಗಳಿಗೆ ಹೊಡೆತ ಬಿದ್ದಂತಾಗಿದೆ.
ಪ್ರಮುಖವಾಗಿ ಸಾಂಸ್ಕೃತಿಕ ಹಬ್ಬಗಳಿಗೆ ನಿಷೇಧ ಹೇರಿರುವುದರಿಂದಾಗಿ ಧ್ವನಿವರ್ಧಕಗಳ ವ್ಯಾಪಾರಸ್ಥರಿಗೆ ಹೊಡೆತ ಬಿದ್ದಿದೆ. ದಸರಾ ಸಾಂಸ್ಕೃತಿಕಾ ಕಾರ್ಯಕ್ರಮಗಳಿಗಾಗಿ ಬಾಡಿಗೆ ರೂಪದಲ್ಲಿ ನೀಡುತ್ತಿದ್ದ ಸೌಂಡ್ಸ್ ಸಿಸ್ಟಮ್ಗಳನ್ನು ಕೇಳುವರೇ ಇಲ್ಲದಾಗಿದೆ.
ಅಲ್ಲದೆ ಮಾರ್ಚ್ನಿಂದ ಈವರೆಗೆ ಯಾವುದೇ ಕಾರ್ಯಕ್ರಮ ನಡೆಯದೇ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಇನ್ನು ದಸರಾದಲ್ಲಾದರೂ ಒಂದಷ್ಟು ಕಾರ್ಯಕ್ರಮ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಇನ್ನಷ್ಟು ಸಂಕಟ ಎದುರಿಸಬೇಕಾಗಿದೆ.
ಕೊರೊನಾದಿಂದ ಮೂಲೆ ಸೇರಿದ ಧ್ವನಿವರ್ಧಕ: ದಸರಾ ನಂಬಿದ್ದವರಿಗೂ ನಿರಾಸೆ ಇದಕ್ಕೂ ಮೊದಲು ಗಣೇಶ ಹಬ್ಬದಲ್ಲೂ ಮೈಕ್ ಹಾಗೂ ಸೌಂಡ್ಸ್ ಸಿಸ್ಟಮ್ಗಳ ಬಳಕೆಗೆ ಬ್ರೇಕ್ ಬಿದ್ದಿದ್ದರಿಂದಾಗಿ ಕೆಲಸವಿರದೇ ಮನೆಯಲ್ಲೇ ಕೂರಬೇಕಾಗಿತ್ತು, ಇದೀಗ ದಸರಾದಲ್ಲೂ ಧ್ವನಿವರ್ಧಕ ಉದ್ಯಮಿಗಳಿಗೆ ಸಂಕಷ್ಟಕ್ಕೆ ಮುಂದುವರಿದಿದೆ.
ಅರಮನೆ ಆವರಣಕ್ಕೆ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮಗಳು ಸೀಮಿತವಾಗಿರುವುದರಿಂದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಂಬಿರುವ 250ಕ್ಕೂ ಹೆಚ್ಚು ಸೌಂಡ್ಸ್ ಸಿಸ್ಟಮ್ಗಳ 2 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.