ಕರ್ನಾಟಕ

karnataka

ETV Bharat / state

ಮೈಸೂರು : ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೇಷ್ಮೆ ಸೀರೆ ವ್ಯಾಪಾರಿ - Business man committed suicide in Mysore news

ಇವರು ರೇಷ್ಮೆ ಸೀರೆಗಳನ್ನು ಹೊರ ದೇಶಕ್ಕೆ ರಫ್ತು ಸಹ ಮಾಡುತ್ತಿದ್ದರಂತೆ. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆ ಎಸ್.ಮಾಣಿಕ್ಯಂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ..

ರೈಲಿಗೆ ಹಾರಿ ಆತ್ಮಹತ್ಯೆ
ರೈಲಿಗೆ ಹಾರಿ ಆತ್ಮಹತ್ಯೆ

By

Published : Oct 23, 2021, 2:55 PM IST

ಮೈಸೂರು :ಕೋವಿಡ್ ಕಾರಣದಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಮೈಸೂರಿನ ರೇಷ್ಮೆ ಸೀರೆ ವ್ಯಾಪಾರಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಂಡವಪುರ ರೈಲ್ವೆ ನಿಲ್ದಾಣದ ಸಮೀಪ ಗುರುವಾರ ನಡೆದಿದೆ.

ಎಂದಿನಿಂತೆ ಸೀರೆ ವ್ಯಾಪಾರದ ಬಾಕಿ ಹಣ ವಸೂಲಿ ಮಾಡಿಕೊಂಡು ಬರುತ್ತೇನೆಂದು ಗುರುವಾರ ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದು, ಸಂಜೆ ಮೈಸೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ರೈಲು ಬರುತ್ತಿದ್ದಂತೆ, ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂದೆ ಪಾಂಡವಪುರ ನಿಲ್ದಾಣವಿದ್ದುದರಿಂದ ರೈಲಿನ ವೇಗ ತಗ್ಗಿದ್ದು, ಲೋಕೊ ಪೈಲಟ್ ರೈಲು ನಿಲ್ಲಿಸಿ, ಮೈಸೂರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹಳಿ ಮೇಲಿದ್ದ ಮಾಣಿಕ್ಯ ದೇಹವನ್ನು ಪಕ್ಕಕ್ಕೆ ಸರಿಸಿ ಪ್ರಯಾಣ ಮುಂದುವರೆಸಿದ್ದಾರೆ.

ಮೈಸೂರು ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮಾಣಿಕ್ಯಂ ಅವರ ಬಲ ಮುಂಗಾಲು ತುಂಡರಿಸಿದ್ದು, ತಲೆ ಭಾಗದಲ್ಲಿ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದು ತಿಳಿದು ಬಂದಿದೆ.‌ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿ, ಸ್ಥಳ ಮಹಜರು ನಡೆಸಿ, ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿದ್ದಾರೆ. ಇದ್ದಕ್ಕಿದ್ದಂತೆ ಹಳಿ ಮೇಲೆ ಬಂದ ವ್ಯಕ್ತಿ ಎಷ್ಟೇ ಹಾರನ್ ಮಾಡಿದರುೂ ಜಗ್ಗಲಿಲ್ಲ ಎಂದು ರೈಲ್ವೆ ಚಾಲಕರು ಮಾಹಿತಿ ನೀಡಿರುವುದರಿಂದ ಆತ್ಮಹತ್ಯೆ ಪ್ರಕರಣ ದಾಖಲಿಸಲಾಗಿದೆ.

ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಶಂಕೆ :ಮೈಸೂರಿನ ಸುಣ್ಣದಕೇರಿಯ ನಾಲಾಬೀದಿ ನಿವಾಸಿ ಎಸ್ ಮಾಣಿಕ್ಯಂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ಲಷ್ಕರ್ ಮೊಹಲ್ಲಾ ಕುಂಬಾರಗೇರಿಯ‌ ಉಮಾ ಟಾಕೀಸ್ ರಸ್ತೆಯಲ್ಲಿ ಎಸ್.ಮಾಣಿಕ್ಯಂ ರೇಷ್ಮೆ ಸೀರೆ ವ್ಯಾಪಾರದ ಅಂಗಡಿ ಹೊಂದಿದ್ದಾರೆ.

ಇವರು ರೇಷ್ಮೆ ಸೀರೆಗಳನ್ನು ಹೊರ ದೇಶಕ್ಕೆ ರಫ್ತು ಸಹ ಮಾಡುತ್ತಿದ್ದರಂತೆ. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆ ಎಸ್.ಮಾಣಿಕ್ಯಂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ.

ಓದಿ:ಹುಕ್ಕೇರಿಯಲ್ಲಿ ಬ್ಲ್ಯಾಕ್ ಫಂಗಸ್​ಗೆ ಪತ್ನಿ ಬಲಿ.. ಮನನೊಂದ ವ್ಯಕ್ತಿ ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆ

For All Latest Updates

TAGGED:

ABOUT THE AUTHOR

...view details