ಕರ್ನಾಟಕ

karnataka

ETV Bharat / state

ಮೈಸೂರಿಗೂ ಸಿದ್ದೇಶ್ವರ ಶ್ರೀಗಳಿಗೂ ಇತ್ತು ಅವಿನಾಭಾವ ಸಂಬಂಧ - ಸುತ್ತೂರು ಶ್ರೀ ಗಳ ಕಂಬನಿ

ಸಿದ್ದೇಶ್ವರ ಶ್ರೀಗಳಿಗೂ ಸುತ್ತೂರು ಮಠಕ್ಕೂ ಅತ್ಯುತ್ತಮ ಸಂಬಂಧ - 1991ರಿಂದಲೂ ಭಕ್ತರಿಗೆ ಶ್ರೀಗಳ ಉಪನ್ಯಾಸ - ಶ್ರೀಗಳ ಅಗಲಿಕೆಯಿಂದ ಭಕ್ತರಲ್ಲಿ ಮೌನ

ಮೈಸೂರಿಗೂ ಸಿದ್ದೇಶ್ವರ ಶ್ರೀಗಳಿಗೂ ಇತ್ತು ಅವಿನಾಭಾವ ಸಂಬಂಧ
http://10.10.50.85:6060/reg-lowres/03-January-2023/ka-mys01-03-12-20230-siddeswarashreenews-7208092_03012023111735_0301f_1672724855_529.jpg

By

Published : Jan 3, 2023, 1:12 PM IST

ಮೈಸೂರು:ವಿಜಯಪುರದ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗೂ, ಮೈಸೂರಿಗೂ ಅವಿನಾಭಾವ ಸಂಬಂಧವಿದ್ದು, ಅವರು ಮೈಸೂರಿಗೆ ಆಗಮಿಸಿದಾಗ ಸುತ್ತೂರು ಮಠದ ಸಾಮಾನ್ಯ ವಸತಿ ಗೃಹದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ನಂತರ ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ಭಕ್ತರಿಗೆ ಪ್ರವಚನ ನೀಡುತ್ತಿದ್ದರು.

ಮೈಸೂರಿಗೂ ಸಿದ್ದೇಶ್ವರ ಶ್ರೀಗಳಿಗೂ ಇತ್ತು ಅವಿನಾಭಾವ ಸಂಬಂಧ

ಬೆಳಗ್ಗೆ ಸುತ್ತೂರು ಮಠದಿಂದ ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮುಖಾಂತರ ಹತ್ತಿ ನಂತರ ಬೆಟ್ಟದಲ್ಲಿರುವ ನಂದಿಯ ಬಳಿ ಕುಳಿತು ಕೊಂಡು ವಾಪಸ್ ಸುತ್ತೂರು ಮಠಕ್ಕೆ ಬರುತ್ತಿದ್ದರು. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಮೈಸೂರಿನ ಜೆಎಸ್ಎಸ್ ಸಂಸ್ಕೃತ ಪಾಠ ಶಾಲೆಯ ನೂತನ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯವನ್ನು ಉದ್ಘಾಟನೆ ಮಾಡಲು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಿದಾಗ ಸಿದ್ದೇಶ್ವರ ಶ್ರೀ ಗಳು ಪ್ರಧಾನಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಮೈಸೂರಿಗೂ ಸಿದ್ದೇಶ್ವರ ಶ್ರೀಗಳಿಗೂ ಇತ್ತು ಅವಿನಾಭಾವ ಸಂಬಂಧ
ಮೈಸೂರಿನಲ್ಲಿ ಸಿದ್ದೇಶ್ವರ ಶ್ರೀ ಗಳ ಪ್ರವಚನದ ಇತಿಹಾಸ: 1991ರಲ್ಲಿ ಸಿದ್ದೇಶ್ವರ ಶ್ರೀ ಗಳು ಭಗವಂತ ಕುರಿತು 30 ದಿನಗಳ ಪ್ರವಚನವನ್ನು ನಗರದ ನಾಕತ್ರ ಫಾರ್ಮ್ ನಲ್ಲಿ ನೀಡಿದ್ದರು ನಂತರ 1995ರಲ್ಲಿ ಭಕ್ತಿಯೋಗ, 1999 ಈಶ ಉಪನಿಷತ್, 2000ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಯೋಗೋಪನಿಷತ್ ಕುರಿತು ಪ್ರವಚನವನ್ನು ಸಿದ್ದೇಶ್ವರ ಶ್ರೀ ಗಳು ನೀಡಿ ಭಕ್ತರನ್ನು ಮಂತ್ರಮುಗ್ದಗೊಳಿಸಿದ್ದರು.

ನಂತರ 2002 ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯವು ಏರ್ಪಡಿಸಿದ್ದ ಇಂದಿನ ಮಾಹಿತಿ ಯುಗದಲ್ಲಿ ಜ್ಞಾನ ಹಾಗೂ ತಂತ್ರಜ್ಞಾನದ ಪಾತ್ರ ಕುರಿತು ಸಿದ್ದೇಶ್ವರ ಶ್ರೀ ಗಳು ಉಪನ್ಯಾಸ ನೀಡಿ, ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೂ ಹಲವಾರು ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಗಳು ಭಾಗವಹಿಸಿ ಪ್ರವಚನ ನೀಡಿದ್ದರು.

ಸುತ್ತೂರು ಶ್ರೀ ಗಳ ಕಂಬನಿ:ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ನಾಡಿನ ಜನರಲ್ಲಿ ದಿಗ್ಭ್ರಮೆ ಮೂಡಿಸಿದೆ, ಅವರನ್ನ ಜನರು ನಡೆದಾಡುವ ದೇವರು ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದರು. ಸುತ್ತೂರು ಮಠಕ್ಕೆ ಪ್ರತಿ ವರ್ಷವೂ ತಪ್ಪದೇ ಆಗಮಿಸಿ ತಿಂಗಳುಗಟ್ಟಲೆ ಮಠದಲ್ಲಿ ವಾಸ್ತವ್ಯ ಹೂಡಿ ಮಠಾಧಿಪತಿಗಳು ಹಾಗೂ ಶ್ರೀ ಸಾಮಾನ್ಯರಿಗೆ ದಾರ್ಶನಿಕ ಮಾತುಗಳಿಂದ ಮನದ ಕೊಳೆ ತೊಳೆಯುತ್ತಿದ್ದರು.

ಅವರು ವೈಕುಂಠ ಏಕಾದಶಿಯ ದಿನ ದೇಹ ತ್ಯಾಗ ಮಾಡಿದ್ದು, ಅನಿರೀಕ್ಷಿತ ಹಾಗೂ ದೈವ ಇಚ್ಛೆ, ಇಂತಹ ಶ್ರೀ ಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮೌಲ್ಯಗಳು ಸಾರ್ವಕಾಲಿಕ ಮೌಲ್ಯಗಳಾಗಿದ್ದು ಅವರಿಗೆ ಭಕ್ತಿ ಪೂರ್ವಕ ಶ್ರದ್ಧಾಂಜಲಿಯನ್ನ ಅರ್ಪಿಸಿದ್ದಾರೆ.

ಇದನ್ನೂ ಓದಿ: 'ದೇಹವನ್ನು ಅಗ್ನಿಗೆ ಅರ್ಪಿಸಿ, ಸ್ಮಾರಕ ಕಟ್ಟಬೇಡಿ': ಸಿದ್ದೇಶ್ವರ ಶ್ರೀಗಳು ಬರೆದಿದ್ದ ಅಭಿವಂದನ ಪತ್ರ

ABOUT THE AUTHOR

...view details