ಕರ್ನಾಟಕ

karnataka

ETV Bharat / state

ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪಗೆ ಸ್ವಾತಂತ್ರ್ಯ ಇಲ್ಲ: ಸಿದ್ದರಾಮಯ್ಯ - Siddaramiah speak about yadiyurappa in mysore

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷದ ಹೈಕಮಾಂಡ್​ ಹಿಡಿದಿಟ್ಟಿದೆ. ಸಂಪುಟ ರಚನೆ, ವಿಸ್ತರಣೆ ಸಿಎಂ ಪರಮಾಧಿಕಾರ ಆಗಿದ್ದರೂ ಸಹ ಬಿಜೆಪಿಯಲ್ಲಿ ಅವರಿಗೆ ಸ್ವಾತಂತ್ರ್ಯ ಇಲ್ಲವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

siddaramiah
ಸಿದ್ದರಾಮಯ್ಯ

By

Published : Feb 6, 2020, 4:49 PM IST

ಮೈಸೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತಿಗೆ ಅವರ ಪಕ್ಷದ ಹೈಕಮಾಂಡ್​ ಬೆಲೆ ಕೊಡ್ತಿಲ್ಲ. ಬಿಎಸ್​ವೈ ಕೈಯನ್ನು ಆ ಪಕ್ಷದ ನಾಯಕರು ಕಟ್ಟಿಹಾಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಹೆಚ್.ಡಿ. ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಿಸಲು ಇನ್ನೂ ಆರು ಇಲಾಖೆಗಳು ಬಾಕಿ ಉಳಿದಿವೆ. ಅವರು ಅನುಮತಿಗಾಗಿ ದೆಹಲಿಗೆ ಹೋಗಿದ್ದರು. ಆದರೆ ಹೈಕಮಾಂಡ್ ಅವರಿಗೆ ಅನುಮತಿಯನ್ನ ನೀಡಿಲ್ಲ. ಯಡಿಯೂರಪ್ಪ ಅವರಿಗೆ ಸ್ವಾತಂತ್ರ್ಯ ಇಲ್ಲವೆಂದು ಮರುಕ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

ನಾನು ಮುಖ್ಯಮಂತ್ರಿಯಾಗಿದ್ದಾಗ ಸಂಪುಟ ಪುನರಾಚನೆ ಮಾಡುವಾಗ ಅಷ್ಟೊಂದು ಬಾರಿ ಹೈಕಮಾಂಡ್ ಕೇಳಿಲ್ಲ. ಆದರೆ ಯಡಿಯೂರಪ್ಪ ಸ್ಥಿತಿ ನೋಡಿ ಸಾರಿ ಅನ್ನಿಸುತ್ತಿದೆ ಎಂದರು. ಇಂದು ಸಂಪುಟ ವಿಸ್ತರಣೆಯಾಗಿರುವುದು ಖುಷಿಯಾಗಿಲ್ಲ. ಆದರೆ ಜನರಿಂದ ಆಯ್ಕೆಯಾಗಿದ್ದಾರೆ‌‌. ಒಳ್ಳೆಯ ಕೆಲಸ ಮಾಡಲಿ ಎಂದು ಆಶಿಸುವುದಾಗಿ ಸಿದ್ದರಾಮಯ್ಯ ಹೇಳಿದ್ರು.

ABOUT THE AUTHOR

...view details