ಮೈಸೂರು : ಅಯೋಧ್ಯೆ ತೀರ್ಪು ಬಂದ ನಂತರ ಪ್ರತಿಕ್ರಿಯಿಸುತ್ತೇನೆ. ಈಗ ಕಜ್ಜಾಯ ತಿನ್ನುತ್ತಿದ್ದೇನೆ ಎಂದ ಸಿದ್ದರಾಮಯ್ಯ, ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸದೆ ಉಪ ಚುನಾವಣಾ ತಯಾರಿಗೆ ಹೊರಟರು.
ಕಜ್ಜಾಯ ತಿನ್ನುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ...? - siddaramayya statement to ayodya verdict
ಅಯೋಧ್ಯೆ ತೀರ್ಪು ಬಂದ ನಂತರ ಪ್ರತಿಕ್ರಿಯಿಸುತ್ತೇನೆ. ಈಗ ಕಜ್ಜಾಯ ತಿನ್ನುತ್ತಿದ್ದೇನೆ ಎಂದ ಸಿದ್ದರಾಮಯ್ಯ, ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸದೇ ಉಪ ಚುನಾವಣಾ ತಯಾರಿಗೆ ಹೊರಟಿದ್ದಾರೆ.
ಉಪ ಚುನಾವಣೆ ಉಸ್ತುವಾರಿ ಹೊತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇಂದು ಹುಣಸೂರು ಉಪ ಚುನಾವಣೆಯ ತಯಾರಿಗೆ ಹೊರಡುವ ಮುನ್ನ ತಮ್ಮ ಟಿ.ಕೆ. ಬಡಾವಣೆಯಲ್ಲಿರುವ ಮನೆಯ ಮುಂದೆ ಮಾಧ್ಯಮದವರು ಅಯೋಧ್ಯೆ ತೀರ್ಪಿನ ಬಗ್ಗೆ ಕೇಳಿದ ಪ್ರಶ್ನೆಗೆ ತೀರ್ಪು ಬಂದಿಲ್ಲ ಬಂದ ನಂತರ ಪ್ರತಿಕ್ರಿಯಿಸುತ್ತೇನೆ. ಈಗ ಕಜ್ಜಾಯ ತಿನ್ನುತ್ತಿದ್ದೇನೆ ಎಂದು ಹೇಳಿ ಹುಣಸೂರು ಕಡೆ ಹೊರಟರು.
ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಸಿದ್ದರಾಮಯ್ಯ ಮೈಸೂರು ನಿವಾಸದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಚುನಾವಣೆ ಗೆಲ್ಲುವ ಬಗ್ಗೆ ಚರ್ಚೆ ನಡೆಸಿ ಕೆಲವರಿಗೆ ಸ್ಥಳೀಯ ಜವಾಬ್ದಾರಿಗಳನ್ನು ನೀಡಲಾಯಿತು ಎನ್ನಲಾಗಿದೆ.