ಮೈಸೂರು:ಕೇಂದ್ರ ಗೃಹಮಂತ್ರಿ ಅಮಿತ್ ಶಾ ಬಲವಂತವಾಗಿ ಹಿಂದಿ ಹೇರಿಕೆ ಮಾಡಿದರೆ ಅದು ಒಕ್ಕೂಟ ವ್ಯವಸ್ಥೆಗೆ ವಿರೋಧವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ಲಲಿತಾ ಮಹಲ್ ಹೆಲಿಪ್ಯಾಡ್‌ನಲ್ಲಿ ಸಂಪರ್ಕ ಭಾಷೆಯಾಗಿ ಹಿಂದಿ ಬಳಸಿ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿ ರಾಷ್ಟ್ರ ಭಾಷೆನೂ ಅಲ್ಲ, ಸಂಪರ್ಕ ಭಾಷೆನೂ ಅಲ್ಲ ಎಂದರು.
ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಲ್ಲಿ ತಮಿಳು, ಕೇರಳದಲ್ಲಿ ಮಲಯಾಳಿ ಸಾರ್ವಭೌಮ ಭಾಷೆ. ಅಮಿತ್ ಶಾ ಬಲವಂತವಾಗಿ ಹೇರಿದ್ರೆ ನಾವು ತೀವ್ರ ವಿರೋಧ ಮಾಡ್ತೀವಿ. ಆಯಾ ರಾಜ್ಯಗಳಲ್ಲಿ ಪ್ರಾಂತೀಯ ಭಾಷೆಗಳು ಸಾರ್ವಭೌಮ. ಅಮಿತ್ ಶಾ ಹೇಳಿಕೆ ಬಾಲಿಶತನದ್ದು. ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿದೆ ಎಂದು ಟೀಕಿಸಿದರು.