ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಅವರನ್ನ ಮಾಜಿ ಅನ್ನಲ್ಲ, ಭಾವಿ ಸಿಎಂ ಅಂತೀನಿ: ಜಮೀರ್ ಅಹಮ್ಮದ್ - ಹಳ್ಳಿಹಕ್ಕಿ ವಿರುದ್ಧ ಜಮೀರ್ ಅಹಮ್ಮದ್ ಲೇವಡಿ

ಸಿದ್ದರಾಮಯ್ಯ ಅವರನ್ನು ಮಾಜಿ ಅನ್ನಲ್ಲ ಭಾವಿ ಮುಖ್ಯಮಂತ್ರಿ ಅಂತಾ ಕರೆಯುತ್ತೇನೆ ಎಂದು ಶಾಸಕ ಜಮೀರ್ ಅಹಮ್ಮದ್ ಹೇಳಿದರು.

ಜಮೀರ್ ಅಹಮ್ಮದ್
ಜಮೀರ್ ಅಹಮ್ಮದ್

By

Published : Feb 20, 2021, 2:47 AM IST

ಮೈಸೂರು:ಹುಣಸೂರು ಜನ ಮೊದಲು ಒಬ್ಬ ಜೋಕರ್​ನ ಆಯ್ಕೆ ಮಾಡಿದ್ದರು. ಆ ಜೋಕರ್ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅಂತ ಜೀವನ ಹಾಳು ಮಾಡ್ಕೊಂಡ್ರು ಎಂದು ಹೆಚ್​.ವಿಶ್ವನಾಥ್ ಅವರ ಹೆಸರು ಹೇಳದೇ ಶಾಸಕ ಜಮೀರ್ ಅಹಮ್ಮದ್ ವ್ಯಂಗ್ಯವಾಡಿದರು‌.

ಹುಣಸೂರು ತಾಲೂಕಿನ ಶಾಸಕ ಮಂಜು‌ನಾಥ್ ಅವರ ನೂತನ ಕಚೇರಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಹುಣಸೂರು ಉಪ ಚುನಾವಣೆಯಲ್ಲಿ ಜೋಕರ್ ಸೋತಿದ್ದರಿಂದ, ಮಂಜುನಾಥ್​ಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂದರು.

ಜಮೀರ್ ಅಹಮ್ಮದ್ ಭಾಷಣ

ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಅನ್ನಲ್ಲ ಭಾವಿ ಮುಖ್ಯಮಂತ್ರಿ ಎಂದು ಹೇಳುವುದಾಗಿ ಭಾಷಣ ಆರಂಭಿಸಿದ ಜಮೀರ್ ಅಹಮ್ಮದ್, 2018ರ ಚುನಾವಣೆಯಲ್ಲಿ ತಪ್ಪು ಮಾಡಿದ್ದೀವಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಜನರಿಗೆ ಒಳ್ಳೆಯದಾಗ ಬೇಕಾದರೆ, ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ABOUT THE AUTHOR

...view details