ಕರ್ನಾಟಕ

karnataka

ETV Bharat / state

ಕೊಡವರ ಅವಹೇಳನ ಆರೋಪ ಪ್ರಕರಣ: ಸಿದ್ದರಾಮಯ್ಯ ಕೇಸ್ ಮೈಸೂರಿಗೆ ವರ್ಗಾವಣೆ - Siddaramaiah latest news

ಕೊಡವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ ಎದುರಿಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣೆಯಿಂದ ಅಶೋಕಪುರಂ ಠಾಣೆಗೆ ವರ್ಗಾವಣೆಯಾಗಿದೆ.

Siddaramaiah
ಸಿದ್ದರಾಮಯ್ಯ

By

Published : Feb 23, 2021, 1:50 PM IST

ಮೈಸೂರು: ಕೊಡವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ ಎದುರಿಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಕರಣ ಮೈಸೂರಿಗೆ ವರ್ಗಾವಣೆಗೊಂಡಿದೆ.

2020ರ ಡಿಸೆಂಬರ್ 18ರಂದು ಮೈಸೂರಿನ ಅರವಿಂದ ನಗರದಲ್ಲಿರುವ ಕಾಲಭೈರವೇಶ್ವರ ಕಲ್ಯಾಣಮಂಟಪದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮ‌ ಜನಾಧಿಕಾರಿ ಸಮಾವೇಶದಲ್ಲಿ ಭಾಷಣ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, ಕೊಡವರು ದನದ ಮಾಂಸ ತಿನ್ನುತ್ತಾರೆ ಎಂದು ಹೇಳಿದ್ದರು ಎಂಬ ಆರೋಪ ಇದಾಗಿದೆ.

ಈ ಸಂಬಂಧ, ಶಾಂತಿಯೇಂಡ ರವಿ ಕುಶಾಲಪ್ಪ ಅವರು, ಕೊಡವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಐಪಿಸಿ 155ರ ಅಡಿಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸಿದ್ದರಾಮಯ್ಯ ಕಾರ್ಯಕ್ರಮ ಅಶೋಕಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಮಡಿಕೇರಿ ಗ್ರಾಮಾಂತರ ಠಾಣೆಯಿಂದ ಅಶೋಕಪುರಂ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದೆ.

ABOUT THE AUTHOR

...view details