ಮೈಸೂರು: ಹುಣಸೂರು ತಾಲೂಕಿನ ನೇರಳಕುಪ್ಪೆ ಎ ಹಾಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಪರ ಪ್ರಚಾರ ಮಾಡುತ್ತಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಂಟಿಬಿ ನಾಗರಾಜ್ ಒಬ್ಬ ಯಕಶ್ಚಿತ್, ಆತ ನಾನಗ್ಯಾಕೆ ದುಡ್ಡು ಕೊಡ್ತಾನೆ ಎಂದು ಕಿಡಿಕಾರಿದರು.
ಎಂಟಿಬಿ ನಾಗರಾಜ್ ಒಬ್ಬ ಯಕಶ್ಚಿತ್, ಆತನಿಂದ ನಾನೇಕೆ ದುಡ್ಡು ಪಡೆಯಲಿ, ಜನರೇ ನನಗೆ ದುಡ್ಡು ಕೊಟ್ಟು ಗೆಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.