ಕರ್ನಾಟಕ

karnataka

ETV Bharat / state

ನನ್ನ ಸೋಲಿಸಿಲ್ಲ ಅಂತಾ ನಿಮ್ಮ ಆತ್ಮ ಮುಟ್ಟಿಕೊಂಡು ಹೇಳಿ, ಸೋಲಿಸಿ ಈಗ ಟಿಕೆಟ್​ ಕೇಳೋಕೆ ಬಂದಿದ್ದೀರಾ : ಸಿದ್ದರಾಮಯ್ಯ ಕಿಡಿ - ಮೈಸೂರಲ್ಲಿ ಸಿದ್ದರಾಮಯ್ಯ ಆಕ್ರೋಶ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಕೆ.ಮರಿಗೌಡ ಅಭಿಮಾನಿಗಳ ವಿರುದ್ಧ ಮೈಸೂರಲ್ಲಿ ಕಿಡಿಕಾರಿದ್ದಾರೆ..

Siddaramaiah
ಸಿದ್ದರಾಮಯ್ಯ

By

Published : Nov 19, 2021, 5:38 PM IST

Updated : Nov 19, 2021, 5:46 PM IST

ಮೈಸೂರು :ಎಲ್ಲಾ ನನ್ನ ಸೋಲಿಸಿ, ಈಗ ಟಿಕೆಟ್ ಕೇಳೋಕೆ ಬಂದಿದ್ದೀರಾ? ನಿಮಗೆ ನಾಚಿಕೆ ಆಗಲ್ವ ಎಂದು ಕೆ.ಮರಿಗೌಡ ಅಭಿಮಾನಿಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಮರಿಗೌಡ ಅಭಿಮಾನಿಗಳ ವಿರುದ್ಧ ಕೋಪಗೊಂಡ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ರಾಮಕೃಷ್ಣನಗರದಲ್ಲಿರುವ ಸಿದ್ದರಾಮಯ್ಯನವರ ನಿವಾಸದ ಬಳಿ ಕೆ.ಮರೀಗೌಡ ಅವರಿಗೆ ಎಂಎಲ್​ಸಿ ಟಿಕೆಟ್ ಕೊಡುವಂತೆ ಅವರ ಅಭಿಮಾನಿಗಳು ಸಿದ್ದರಾಮಯ್ಯನವರ ಕಾರನ್ನು ಅಡ್ಡಗಟ್ಟಿದರು.

ಈ ವೇಳೆ ಕೋಪಗೊಂಡ ಸಿದ್ದರಾಮಯ್ಯನವರು, ನನ್ನ ಸೋಲಿಸಿಲ್ಲ ಅಂತಾ ನಿಮ್ಮ ಆತ್ಮ ಮುಟ್ಟಿಕೊಂಡು ಹೇಳಿ. ನನ್ನ ಸೋಲಿಸಿ ಈಗ ಟಿಕೆಟ್ ಕೇಳೋಕೆ ಬಂದಿದ್ದೀರಾ, ಯಾರಿಗೆ ಏನು ಕೊಡಬೇಕು ಅಂತಾ ಗೊತ್ತಿದೆ. ನಡೀರಿ ಆ ಕಡೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಕಾಂಗ್ರೆಸ್​ ರಾಜಕೀಯ ಎಷ್ಟು ಕೆಳ ಮಟ್ಟಕ್ಕಿಳಿದಿದೆ ಎನ್ನುವುದು ಗೊತ್ತಾಗುತ್ತಿದೆ: ಸಿಎಂ ಬೊಮ್ಮಾಯಿ

Last Updated : Nov 19, 2021, 5:46 PM IST

ABOUT THE AUTHOR

...view details